ಚಹಾವು ದೈನಂದಿನ ಜೀವನದ ಒಂದು ಭಾಗವಾಗಿದೆ. ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ, ಇದರಿಂದಾಗಿ ದೇಹದ ಆಲಸ್ಯವು ಕಣ್ಮರೆಯಾಗುತ್ತದೆ ಮತ್ತು ದೇಹವು ಶಕ್ತಿಯಿಂದ ತುಂಬಿರುತ್ತದೆ. ಚಹಾ ಪ್ರಿಯರು ಹಾಲಿನ ಟೀ, ಬ್ಲ್ಯಾಕ್ ಟೀ, ಗ್ರೀನ್ ಟೀ, ಮಸಾಲಾ ಚಹಾ ಮುಂತಾದ ಹಲವು ವಿಧದ ಚಹಾವನ್ನು ಸೇವಿಸುತ್ತಾರೆ. ಅನೇಕ ಜನರು ಬ್ಲ್ಯಾಕ್ ಚಹಾವನ್ನು ತುಂಬಾ ಇಷ್ಟಪಡುತ್ತಾರೆ, ಬ್ಲ್ಯಾಕ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆಂಟಿ ಆಕ್ಸಿಡೆಂಟ್, ಪಾಲಿಫಿನಾಲ್ ತ್ವಚೆಯ ಹೊಳಪು, ಮೊಡವೆ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಯಾಟೆಚಿನ್‌ನಂತಹ ಅಂಶಗಳಿಂದ ಸಮೃದ್ಧವಾಗಿರುವ ಬ್ಲಾಕ್ ಚಹಾವನ್ನು ಪ್ರತಿದಿನ ಸೇವಿಸುವುದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಬ್ಲಾಕ್ ಟೀ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಸಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಬ್ಲ್ಯಾಕ್ ಟೀಯಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಚರ್ಮದ ಉರಿಯೂತ ಹೋಗುತ್ತದೆ: ಬ್ಲ್ಯಾಕ್ ಟೀಯನ್ನ ಸೇವನೆ ಮಾಡೋದ್ರಿಂದ ಚರ್ಮದ ಉರಿಯೂತವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಚರ್ಮವು ಉರಿಯೋದು ಸರ್ವೇ ಸಾಮಾನ್ಯ ಜೊತೆಗೆ ಚರ್ಮ ಕೆಲವೊಮ್ಮೆ ಊದುಕೊಳ್ಳುತ್ತಿದ್ದರೆ ಅಂತವರು ಈ ಬ್ಲ್ಯಾಕ್ ಟೀಯನ್ನ ಕುಡಿಯೋದ್ರಿಂದ ಊತವನ್ನ ಕಡಿಮೆ ಮಾಡಲು ಸಹಕಾರಿಯಾಗಿದೆ.
ಸುಕ್ಕುಗಳ ಸಮಸ್ಯೆಯನ್ನು ನಿವಾರಿಸುತ್ತದೆ:- ಬ್ಲ್ಯಾಕ್ ಟೀ ಸೇವನೆ ಮಾಡೊದ್ರಿಂದ ಚರ್ಮಕ್ಕೆ ಸಂಬಂಧ ಪಟ್ಟಂತೆ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಜೊತೆಗೆ ಈ ಬ್ಲ್ಯಾಕ್ ಟೀ ಸೇವನೆ ಮಾಡೋದ್ರಿಂದ ನಿಮ್ಮ ಚರ್ಮದ ಸುಕ್ಕುಗಳನ್ನ ಹೋಗಲಾಡಿಸಬಹುದು. ಬ್ಲ್ಯಾಕ್ ಟೀಯು ಪಾಲಿಫಿನಾಲ್‌ಗಳನ್ನು ಹೊಂದಿರುವ ಕಾರಣ ನಿಮ್ಮ ಏಜಿಂಗ್ ಮಾಕ್ಸ್ಗಳನ್ನ ಕಡಿಮೆ ಮಾಡಬಹುದು.
ಚರ್ಮದ ತುರಿಗೆ & ಅಲರ್ಜಿ ತೊಡೆದುಹಾಕಲು: ಕೆಲವರಿಗೆ ಚರ್ಮದ ಸಮಸ್ಯೆ ಕಾಡುತ್ತಾ ಇರುತ್ತೆ. ಧೂಳಿನಲ್ಲಿ ಓಡಾಡೋದ್ರಿಂದ ಚರ್ಮದ ಮೇಲೆ ದೂಳು ಕೂರೋದ್ರಿಂದ ಚರ್ಮ ತುರಿಯೋಕೆ ಶುರು ಮಾಡುತ್ತೆ ಇನ್ನು ಕೆಲವರಿಗೆ ಬೇಸಿಗೆಯಲ್ಲಿ ಬೆವರಿನಿಂದ ಚರ್ಮದ ಅಲರ್ಜಿ ಹೆಚ್ಚಾಗಿ ಕಾಡುತ್ತೆ ಅಂತವರು ಬ್ಯಾಕ್ ಟೀ ಸೇವನೆ ಮಾಡೋದ್ರಿಂದ ಚರ್ಮದ ಸಮಸ್ಯೆಯನ್ನ ಕಡಿಮೆ ಮಾಡಿಕೊಳ್ಳಬಹುದು. ಇದು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಕೆಲಸ ಮಾಡುತ್ತದೆ, ಆದ್ದರಿಂದ ಬ್ಲ್ಯಾಕ್ ಟೀ ಸೇವನೆಯಿಂದ ಹಲವಾರು ರೀತಿಯ ಸೋಂಕುಗಳನ್ನು ನಿವಾರಿಸಬಹುದು.
R.ರಮ್ಯ, ಪವರ್ ಟಿವಿ