ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಸಂಬಂಧ ನಾನು ಯಾವುದೇ ಕರಡು ತಯಾರಿಸಿಲ್ಲ. ಈ ಸಂಬಂಧ ಕೆಲವು ಪ್ರಸ್ತಾವನೆ ಬಂದಿದ್ದು ನಿಜ, ಆದ್ರೆ, ಯಾವುದಕ್ಕೂ ಸಹಿ ಹಾಕಿಲ್ಲ. ಪ್ರಸ್ತಾವನೆ ಬಂದರೂ ಅದು ಸಚಿವ ಸಂಪುಟದ ಮುಂದೆ ಬಂದಿಲ್ಲ. ಸಚಿವ ಸಂಪುಟದಲ್ಲಿ ಅದು ಅನುಮೋದನೆ ಪಡೆದರೆ ಮಾತ್ರ ಅದಕ್ಕೆ ಬೆಲೆ ಎಂದು ಪವರ್ ಟಿವಿಗೆ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿಕೆ ನೀಡಿದ್ದಾರೆ.
ಸಚಿವ ಸಂಪುಟದ ಅನುಮೋದನೆ ಆಗದೆ ಇದ್ದಾಗ ಸರ್ಕಾರ ಅದರಲ್ಲಿ ಭಾಗಿಯಾಗಿಲ್ಲ ಎಂದರ್ಥ. ಚರ್ಚೆಯೇ ಆಗಿಲ್ಲ ಅಂದಮೇಲೆ ಅದು ಕೇವಲ ಇಲಾಖೆಗಳ ನಡುವೆ ಓಡಾಡುತ್ತಿದ್ದ ಒಂದು ಪೇಪರ್‌ತುಂಡು ಎಂದರ್ಥ ಅಷ್ಟೆ. ಇಂತಹ ವಿಚಾರವನ್ನು ಇಷ್ಟೊಂದು ವಿವಾದ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಜಯಚಂದ್ರ ಹೇಳಿದರು.
ರಾಜಕೀಯವಾಗಿ ಇದರ ಬಗ್ಗೆ ಚರ್ಚೆ ಆಗಿಲ್ಲ, 2016ರ ಯಾವ ಬೆಳವಣಿಗೆಯೂ ನನಗೆ ನೆನಪಿಲ್ಲ ಎಂದುತುಮಕೂರು ಜಿಲ್ಲೆ ಶಿರಾದಲ್ಲಿ ಪವರ್ ಟಿವಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟನೆ ನೀಡಿದ್ದಾರೆ.