Saturday, January 18, 2025

ನಮ್ಮ ಕಾಲದಲ್ಲಿ ಈ ಬಿಲ್ ತಂದಿರಲಿಲ್ಲ

ಬೆಳಗಾವಿ ಅಧಿವೇಶನದಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆಯ ಚರ್ಚೆ ತಾರಕಕ್ಕೇರಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರುಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯಿತು.

ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಲ್ ಬಗ್ಗೆ ಅಥವಾ ಲಾ ಕಮೀಷನ್ ಬಗ್ಗೆ ನಾನು ಪ್ರಸ್ತಾಪಿಸಲ್ಲ. ಹಿಂದೆ ಜಯಚಂದ್ರ ಲಾ ಮಿನಿಸ್ಟರ್ ಆಗಿದ್ದರು. ಆಗ ಈ ಬಿಲ್ ಬಗ್ಗೆ ನಾನು ಕೇಳಿದ್ದೆ.

ನಮ್ಮ ಕಾಲದಲ್ಲಿ ಈ ಬಿಲ್ ತಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ಬಿಜೆಪಿ ಶಾಸಕರು ಮೇಜು ತಟ್ಟಿದಾಗ, ದೊಡ್ಡ ಯುದ್ಧ ಗೆದ್ದವರಂತೆ ಮೇಜು ಕುಟ್ಟುತ್ತೀರಾ. ಏನು ವಿಜಯ ಸಾಧಿಸಿದ್ದೀರಪ್ಪ ಎಂದು ಸಿದ್ದು ಪ್ರಶ್ನೆ ಮಾಡಿದರು.

RELATED ARTICLES

Related Articles

TRENDING ARTICLES