Wednesday, January 22, 2025

ಕೈವಿರುದ್ಧ ಶೋಭಾ ಕೆಂಡ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂದ ಡಿಕೆ ಶಿವಕುಮಾರ್ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಡಿಕೆಶಿ ಎಲ್ಲಾ ಕಾಯ್ದೆಯನ್ನು ತೆಗೆಯುತ್ತೇವೆ ಎಂದಿದ್ದಾರೆ. ಕಾಶ್ಮೀರದ 370ನೇ ವಿಧಿ, ಸಿಎಎ ಕಾಯ್ದೆ ತೆಗಿತೀವಿ ಎಂದಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಗೋಹತ್ಯಾ ನಿಷೇಧ ಕಾಯ್ದೆ ತೆಗಿತೀನಿ ಎಂದಿದ್ದಾರೆ. ಡಿಕೆಶಿ ಮತ್ತು ಕಾಂಗ್ರೆಸ್ ಎಲ್ಲಾ ಕಾಯ್ದೆಗಳನ್ನು ತೆಗೆಯುವುದರಲ್ಲೇ ಇದೆ.

ಜಾತಿವಾದ ಧರ್ಮವಾದ ಮಾಡಿದ್ದು ಕಾಂಗ್ರೆಸ್.  ಕಾಶ್ಮೀರದಲ್ಲಿ ಬೆಂಕಿ ಹಚ್ಚಲು ಕಾರಣಕರ್ತರಾದವರು ಕಾಂಗ್ರೆಸ್ಸಿಗರು. ಕಾಂಗ್ರೆಸಿಗೆ ಕಾಯ್ದೆಗಳನ್ನು ತೆಗೆಯುವ ಅವಕಾಶ ರಾಜ್ಯದ ಜನ ಕೊಡಲ್ಲ. ಕಾಂಗ್ರೆಸ್ಸನ್ನು ಎಲ್ಲಿಡಬೇಕು ಜನ ಅಲ್ಲೇ ಇಟ್ಟಿದ್ದಾರೆ. ಕಾಂಗ್ರೆಸ್ ಇನ್ನಷ್ಟು ಹೀನಸ್ಥಿತಿಗೆ ಹೋಗುತ್ತದೆ. ಡಿಕೆಶಿ ಸಿದ್ಧರಾಮಯ್ಯ ನೀವು ನಿಮ್ಮ ಕಣ್ಣಿನಲ್ಲಿ ಅದನ್ನು ನೋಡುತ್ತೀರಿ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES