Monday, December 23, 2024

ಮತಾಂತರ ಕಾಯ್ದೆಗೆ ಹಳ್ಳಿಹಕ್ಕಿ ವಿರೋಧ

ಬೆಳಗಾವಿ : ಮತಾಂತರ ವಿಧೇಯಕಕ್ಕೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. 12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ಮಾನವ ಧರ್ಮ ಸ್ಥಾಪನೆ ಮಾಡಿದ್ದಾರೆ.

ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದರು. ಭಾರತ ಬಹುತ್ವ ಉಳ್ಳ ದೇಶ. ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನೀಯರು ಸಹಬಾಳ್ವೆ ಬಗ್ಗೆಯೆ ಹೇಳಿರೋದು.

ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಹೊಡೆಯುವ ಕೆಲಸ ಮಾಡಿರೋದು ವಿಪರ್ಯಾಸ ಎಂದರು. ಕಾಂಗ್ರೆಸ್​​​ನವರು ಇಬ್ಬಗೆಯ ನಾಟಕವಾಡುತ್ತಿದ್ದಾರೆ. ಬಸವಣ್ಣನ ತತ್ವವನ್ನ ಅಳವಡಿಸಿಕೊಂಡಿರುವ ಮಠಾಧೀಶರು ಯಾರು ಮಾತನಾಡುತ್ತಿಲ್ಲ ಎಂದರು.

RELATED ARTICLES

Related Articles

TRENDING ARTICLES