Monday, December 23, 2024

ಕೈ ಕೂಸಿಗೆ ಬಿಜೆಪಿ ಟಚ್​​ ಅಪ್

ಬೆಳಗಾವಿ : ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್​​ನವರಿಗೆ ವಿರೋಧ ಮಾಡುವ ನೈತಿಕ ಅಧಿಕಾರ ಇಲ್ಲ ಎಂದು ಕಂದಾಯ ಸಚಿವ ಆರ್​​.ಅಶೋಕ್​​​ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ಕಾನೂನು ಸಚಿವರಾಗಿದ್ದ ಟಿಬಿ ಜಯಚಂದ್ರ ಬಿಲ್ಲನ್ನು ತಯಾರು ಮಾಡಿದ್ದಾರೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಮತಾಂತರ ಕಾಯ್ದೆಯ ಕಡತಕ್ಕೆ ಸಹಿ ಮಾಡಿದ್ದಾರೆ. ಇದು ಅವರೇ ತಂದಿರುವ ಕಾನೂನು. ಈಗ ಬಟಾಬಯಲಾಗಿದೆ ಇದರಿಂದ ಅವರಿಗೆ ಮುಖಭಂಗವಾಗಿದೆ.

ಮುಸ್ಲಿಂರ ಸಭೆಗೆ ಹೋದಾಗ ಚಾಂಪಿಯನ್ ರೀತಿ ಹೋಗುತ್ತಿದ್ದರು. ಇನ್ಮುಂದೆ ಅವರೇ ಕೇಳುತ್ತಾರೆ ನೀವೇ ಸಹಿಮಾಡಿದ್ದರಲ್ಲ ಅಂತಾ ಪ್ರಶ್ನೆ ಮಾಡ್ತಾರೆ. ಇವತ್ತು ಅವರು ಅಪಹಾಸ್ಯಕ್ಕೆ ಈಡಾಗಿದ್ದಾರೆ. ನಾವೂ ಅವರ ಕೂಸಿಗೆ ಸ್ವಲ್ಪ ಬದಲಾವಣೆ ಮಾಡಿ ಟಚ್ ಅಪ್ ಕೊಟ್ಟಿದ್ದೇವೆ. ಈ ಹಿಂದೆ ಸಿದ್ದರಾಮಯ್ಯನವರೇ ಇದನ್ನ ತರೋಕೆ ಬಿಲ್ ತಯಾರು ಮಾಡಿದ್ದರು ಎಂದು ಹೇಳಿದರು.

RELATED ARTICLES

Related Articles

TRENDING ARTICLES