Thursday, October 31, 2024

ನಿರಾಣಿ ಸಿಎಂ ಆಗಲು ನಾನು ಬಿಡಲ್ಲ : ಸಚಿವ ಮುರುಗೇಶ್ ನಿರಾಣಿ

ಈಶ್ವರಪ್ಪ ನೇತೃತ್ವದಲ್ಲಿ ಯತ್ನಾಳ್, ನಿರಾಣಿ ಸಂಧಾನ ಸಭೆ :

ಜನವರಿಯಲ್ಲಿ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ಕೊಡ್ತಾರೆ ಅನ್ನೋ ಚರ್ಚೆ ನಡೆಯುತ್ತಿದ್ದಾಗಲೇ, ಇಲ್ಲೊಬ್ಬರು ಸಿಎಂ ಕುರ್ಚಿಗೆ ಮತ್ತೆ ಟವೆಲ್ ಹಾಕಿದ್ದಾರೆ. ಯತ್ನಾಳ್ ವಿಶ್ವಾಸಗಳಿಸಲು ಹಿರಿಯ ಸಚಿವರ ನೇತೃತ್ವದಲ್ಲಿ ಸಂಧಾನ ಸಭೆ ಕೂಡ ಮಾಡಿದ್ದಾರೆ. ಈಶ್ವರಪ್ಪ ಸಂಧಾನ ಸಭೆ ವಿಫಲವಾಗಿದ್ದು, ಯಾವುದೇ ಕಾರಣಕ್ಕೂ ಅವನ ಪರ ನಾನು ನಿಲ್ಲಲ್ಲ ಎಂದು ಗುಡುಗಿದ್ದಾರೆ. ಇಷ್ಟಕ್ಕೂ ತೆರೆಮರೆಯಲ್ಲಿ ಸಿಎಂ ಆಗ್ಬೇಕೆಂದು ರಣತಂತ್ರ ಮಾಡುತ್ತಿರುವ ಆ ನಾಯಕ ಯಾರು ಗೊತ್ತಾ..?

ಜನವರಿಯಲ್ಲಿ ಬಹುತೇಕ ಸಿಎಂ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡ್ತಿದ್ದಾರೆ ಎಂಬ ಸುದ್ದಿ ಬಿಜೆಪಿ ಮನೆಯಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಇದಕ್ಕೆ ಪೂರಕವಾಗಿರುವಂತೆ ತಮ್ಮ ಸ್ವಕ್ಷೇತ್ರದಲ್ಲಿ ಸಿಎಂ ಆಡಿದ ಆ ಭಾವುಕ ಮಾತುಗಳ ಬೆನ್ನಲೇ ಇಲ್ಲಿ ಮಹಾನ್ ನಾಯಕರೊಬ್ಬರು ಸಿಎಂ ಪಟ್ಟಕೇರಲು ಕಸರತ್ತು ನಡೆಸಿದ್ದಾರೆ.
ಸಿಎಂ ಭಾವುಕದ ಕಣ್ಣೀರಿನ ಮಾತಿನ ಮೇಲೆ ನಾನಾ ವಿಷಯಗಳು ಸದ್ಯ ಹುಟ್ಟಿಕೊಂಡಿದೆ. ಯಡಿಯೂರಪ್ಪ ಬದಲಾವಣೆ ವೇಳೆ ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದ ಮುರುಗೇಶ್ ನಿರಾಣಿ, ಈಗಲೂ ನಾನು ಸಿಎಂ ಸ್ಥಾನದ ರೇಸ್‌ನಲ್ಲಿದ್ದೇನೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನೀವು ಡಿಸಿಎಂ ಆಗಿ, ನಾನು ಸಿಎಂ ಆಗ್ತೀನಿ ಎಂದು ಸ್ಥಾನಮಾನಗಳನ್ನ ಇಬ್ಬರು ನಾಯಕರು ಹಂಚಿಕೊಂಡಿದ್ದಾರೆ.

ಆದ್ರೆ, ನಿರಾಣಿಯನ್ನು ಪ್ರಬಲವಾಗಿ ವಿರೋಧ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಸಂಧಾನ ಸಭೆ ಮಾಡಿಸಲು ಕೆ.ಎಸ್.ಈಶ್ವರಪ್ಪನವರು ಮಧ್ಯಸ್ಥಿಕೆ ವಹಿಸಿಕೊಂಡಿದ್ದರು. ನಿರಾಣಿ- ಯತ್ನಾಳ್ ರಾಜಿ ಪಂಚಾಯತಿ ವಿಫಲವಾಗಿದ್ದು, ಈಶ್ವರಪ್ಪನವರಿಗೆ ಭಾರೀ ಮುಖಭಂಗವಾಗಿದೆ.=====

ಪಂಚಮಸಾಲಿ ಸಮುದಾಯದ ನಾಯಕರನ್ನು ಒಟ್ಟುಗೂಡಿಸಲು ಪ್ರಯತ್ನ :

ಕೆ.ಎಸ್.ಈಶ್ವರಪ್ಪನವರು ನಿರಾಣಿ, ಯತ್ನಾಳ್‌ ರಾಜಿ ಪಂಚಾಯ್ತಿ ವೇಳೆ ಪಂಚಾಮಸಾಲಿ ಸಮುದಾಯದ ಬಗ್ಗೆ ಚರ್ಚೆಯಾಗಿದೆ. ಸಂಧಾನ ಸಭೆ ವೇಳೆ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ನೀವಿಬ್ಬರೂ ಪ್ರಬಲ ಪಂಚಮಸಾಲಿ ಸಮುದಾಯದ ನಾಯಕರು. ಈ ರೀತಿ ಕಿತ್ತಾಟ ನಡೆಸಿ ಬೇರೆಯವರಿಗೆ ಲಾಭ ಮಾಡಿಕೊಡಬೇಡಿ. ನಿರಾಣಿ ಈಗಾಗಲೇ ಸಿಎಂ ಆಗುವ ಬಗ್ಗೆ ಕಸರತ್ತು ನಡೆಸಿದ್ದಾರೆ. ನಿರಾಣಿಗೆ ನಿಮ್ಮ ಬೆಂಬಲ ನೀಡಿ. ನಿರಾಣಿ ಸಂಪುಟದಲ್ಲಿ ದೊಡ್ಡ ಖಾತೆಯನ್ನೇ ತೆಗದುಕೊಳ್ಳಿ ಎಂದು ಈಶ್ವರಪ್ಪ ಸಂಧಾನ ನಡೆಸಿದ್ದಾರೆ. ಈಶ್ವರಪ್ಪ ಸಂಧಾನ ಸಭೆಗೆ ಸೈಲೆಂಟಾಗಿಯೇ ತಿರುಗೇಟು ಕೊಟ್ಟಿರುವ ಯತ್ನಾಳ್, ಯಾವುದೇ ಕಾರಣಕ್ಕೂ ನಾನು ನಿರಾಣಿ ಪರ ನಿಲ್ಲಲ್ಲ. ನಿರಾಣಿ ಸಿಎಂ ಆದರೆ ಇಡೀ ರಾಜ್ಯವನ್ನೇ ಮಾರಿ ಬಿಡ್ತಾನೆ ಎಂದು ಗುಡುಗಿದ್ದಾರೆ. ಯತ್ನಾಳ್ ಮಾತು ಕೇಳುತ್ತಿದ್ದಂತೆ ಇತ್ತ ಈಶ್ವರಪ್ಪನವರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳಿದ್ದಾರೆ.

ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ : 

ಸಚಿವ ಮುರುಗೇಶ್ ನಿರಾಣಿಗೆ ಸವಾಲು ಹಾಕಿರುವ ಯತ್ನಾಳ್, ಯಾವುದೇ ಕಾರಣಕ್ಕೂ ನಿನ್ನನ್ನ ಸಿಎಂ ಆಗಲು ನಾನು ಬಿಡುವುದಿಲ್ಲ. ನೀನು ಎಷ್ಟೇ ಕಸರತ್ತು ಮಾಡಿದ್ದರೂ ನೀನು ಸಿಎಂ ಆಗಲ್ಲ. ಎಂಜಿ ರಸ್ತೆಯಲ್ಲಿರುವ ಶೋ ರೂಂನಲ್ಲಿ ಮೂರು ಲಕ್ಷದ ಸೂಟ್ ತೆಗದುಕೊಂಡಿರೋದು ನನಗೆ ಗೊತ್ತಿದೆ. ನೀನೊಬ್ಬ ಅಯೋಗ್ಯ, ಲುಚ್ಚ ರಾಜಕಾರಿಣಿ ಜೊತೆ ನಾನು ಕೈ ಜೋಡಿಸುವುದಿಲ್ಲ. ನೀನು ಸಿಎಂ ಆದರೆ ಇಡೀ ರಾಜ್ಯವನ್ನ ಲೂಟಿ ಮಾಡ್ತೀಯಾ ಎಂದು ಗುಡುಗಿದ್ದಾರೆ.

ಒಟ್ಟಾರೆ, ಸಿಎಂ ಬದಲಾವಣೆ ಗಾಳಿ ಚರ್ಚೆ ಬೆನ್ನಲ್ಲೇ ಸಿಎಂ ರೇಸ್‌ನಲ್ಲಿ ಮುರುಗೇಶ್ ನಿರಾಣಿ ಮತ್ತೆ ಗುರುತಿಸಿಕೊಂಡಿದ್ದಾರೆ. ಹಿರಿಯ ನಾಯಕರನ್ನು ತೆರಮರೆಯಲ್ಲಿ ಭೇಟಿ ಮಾಡಿ ವಿಶ್ವಾಸಗಳಿಸಲು ಮುರುಗೇಶ್ ನಿರಾಣಿ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES