Saturday, January 11, 2025

ಪತಿಯ ಜನಸೇವೆಯೇ ನನಗೆ ಶ್ರೀರಕ್ಷೆ : ಅನಿತಾ ಗಡ್ಡಿ

ಚುನಾವಣೆಯಲ್ಲಿ ಜಯ ಗಳಿಸಿ ಮತದಾರರಿಂದ ಆಯ್ಕೆಯಾಗಿ ಬಂದವರೇ ಇಂದು ಜನಸೇವೆ ಮಾಡೋದು ವಿರಳ. ಚುನಾವಣೆ ಮುಗಿದ ಮೇಲೆ ನಿವ್ಯಾರೋ, ನಾವ್ಯಾರೋ ಎಂದು ಅಂತರ ಕಾಯ್ದುಕೊಳ್ಳೋದೆ ಹೆಚ್ಚು. ಆದರೆ, ಗದಗ ನಗರದ ಗಡ್ಡಿ ಕುಟುಂಬದಲ್ಲಿ ಮಾತ್ರ ಯಾರೇ ಚುನಾಯಿತರಾದರೂ ಇಡೀ ಕುಟುಂಬ ಸಾರ್ವಜನಿಕರ ಸೇವೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.ಈ ರೀತಿ ಜನರ‌ ಸಮಸ್ಯೆಗೆ ಸಹಾಯ,ಸಹಕಾರ‌ ನೀಡುವ ಗಡ್ಡಿ ಕುಟುಂಬದ ಮನೆಯೊಡತಿ ಅನಿತಾ ವಿಜಯಕುಮಾರ್ ಗಡ್ಡಿಯವರು ಗದಗ-ಬೇಟಗೇರಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಜನಮನ್ನಣೆ ಗಳಿಸುತ್ತಿದ್ದಾರೆ.

ಗದಗ-ಬೇಟಗೇರಿ ನಗರಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕದನ ಕಣ ಕಾವೇರುತ್ತಿದೆ. 33ನೇ ವಾರ್ಡಿನಿಂದ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಅನಿತಾ ಗಡ್ಡಿ ಸ್ಪರ್ಧೆಗೆ ಇಳಿದಿದ್ದು, ಪತಿ ವಿಜಯಕುಮಾರ್ ಅವರಿಂದ ಸಾಕಷ್ಟು ರಾಜಕೀಯ ಹಾಗೂ ಅಭಿವೃದ್ಧಿ ಯೋಜನೆಗಳ ಅನುಭವ ಪಡೆದಿದ್ದಾರೆ. ಪತಿಯ ಜೊತೆಜೊತೆಗೆ‌ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಕೈಜೋಡಿಸಿರುವ ಅನಿತಾ ಅವರು, ಮೂಲ ಸೌಲಭ್ಯಗಳಿಂದ ವಂಚಿತವಾಗಿರೋ 33ನೇ ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಮಾದರಿ ವಾರ್ಡನ್ನು ಕಟ್ಟುವ ಗುರಿ ಹೊಂದಿದ್ದು ಪತಿಯ ಜೊತೆಗೆ ತಾವೂ ಸಹ ಸಾರ್ವಜನಿಕ, ಸಾಮಾಜಿಕ ಸೇವೆ ಮಾಡಲು ಮುಂದಾಗಿದ್ದಾರೆ.

ಶ್ರೀಮತಿ ಅನಿತಾ ವಿಜಯಕುಮಾರ್ ಗಡ್ಡಿಯವರ ಪತಿ 1997-2001ರ ಅವಧಿಯಲ್ಲಿಯೇ ಸ್ವತಂತ್ರ ಅಭ್ಯರ್ಥಿಯಾಗಿ, ನಗರಸಭೆ ಸದಸ್ಯರಾಗಿ ಸೇವೆಗೈದು, ಅಭಿವೃದ್ಧಿ ಕಾರ್ಯದ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉತ್ತಮ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶ್ರೇಷ್ಠ ಉದ್ಯಮಿಯಾಗಿರುವ ಅನಿತಾ ಅವರ ಪತಿ ವಿಜಯಕುಮಾರ್ ಸುಮಾರು ಇನ್ನೂರು ಜನರಿಗೆ ಉದ್ಯೋಗ ನೀಡಿದ್ದಾರೆ. ಈ ಮೂಲಕ ನೂರಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಇದೇ‌ ಪರಂಪರೆಯನ್ನ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮ ಧರ್ಮಪತ್ನಿ ಮೂಲಕ ಮುಂದುವರೆಸಲು ವಿಜಯಕುಮಾರ್ ಗಡ್ಡಿ ತಯಾರಾಗಿದ್ದಾರೆ. ಸರ್ಕಾರದ ಯಾವುದೇ‌ ಅನುದಾನ‌ ಸಿಗಲಾರದ‌ ಸಮಯದಲ್ಲಿಯೂ, ತಮ್ಮ ಸ್ವಂತ ಖರ್ಚಿನಲ್ಲಿ ಹಾಗೂ ಜನರು ನೀಡಿದ ತೆರಿಗೆ ಹಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಚರಂಡಿ, ನೀರು,ರಸ್ತೆ ಅಭಿವೃದ್ಧಿ ಸೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಜನನಾಯಕ ಎಂಬ ಖ್ಯಾತಿ ಗಳಿಸಿರುವ ವಿಜಯಕುಮಾರ್ ಇದೀಗ, ಅವರ ಪತ್ನಿ ಅನಿತಾ‌ರನ್ನು 33 ನೇ ವಾರ್ಡ್‌ನ‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ವಾರ್ಡ್‌ನ ಜನರಿಂದ ಅನಿತಾ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ವಿಜಯಕುಮಾರ್ ಅವರು ಆಡಳಿತಾರೂಢ BJPಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಸುಮಾರು 21 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಬಡ ಹಾಗೂ ಸಾಮಾನ್ಯ ಜನರ ಸಮಸ್ಯೆಗಳನ್ನು ಹತ್ತಿರದಿಂದ ಅನುಭವಿಸಿರುವ ಗಡ್ಡಿ ಮನೆತನದವರು, ಕೈಲಾದಷ್ಟು ಜನರಿಗೆ ಒಳ್ಳೆಯದನ್ನು ಮಾಡುತ್ತಾ‌ ಬಂದಿದ್ದಾರೆ.ಸದ್ಯ ಇವರು ಮಾಡಿರುವ ಜನಪರ ಕಾರ್ಯಕ್ರಮಗಳೇ ಇವರ ಪತ್ನಿಗೆ ಶ್ರೀರಕ್ಷೆಯಾಗಲಿವೆ ಅಂತಾ ವಾರ್ಡ್‌ನ ಜನತೆ ಹೇಳುತ್ತಿದ್ದಾರೆ.

ಒಟ್ಟಾರೆ, ಸಾಕಷ್ಟು ಸಾಮಾಜಿಕ ಸೇವೆಯನ್ನು ಮಾಡುವ ಮೂಲಕ ಹೆಸರು ಮಾಡಿರುವ ಗಡ್ಡಿ ಮನೆತನ, ಮತ್ತೊಮ್ಮೆ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಿ ಎಂಬುವುದು 33ನೇ ವಾರ್ಡ್‌ನ ಜನರ ಆಶಯವಾಗಿದ್ದು, ಗಡ್ಡಿಯವರ ಗೆಲುವು ಬಹುತೇಕ ನಿಶ್ಚಿತ ಅಂತಿದ್ದಾರೆ ಜನ.

RELATED ARTICLES

Related Articles

TRENDING ARTICLES