Saturday, January 18, 2025

ವಯಸ್ಸಿಗೂ ಪ್ರೀತಿಗೂ ಸಂಬಂಧವಿದೆಯ-ಕಲಾಪದಲ್ಲಿ ಸಿದ್ದು ಮಾತು

ಬೆಳಗಾವಿ: ವಯಸ್ಸಿಗೂ ಪ್ರೀತಿಗೂ ಸಂಬಂಧವಿದೆಯೇ? ಇಂಥದ್ದೊಂದು ಸ್ವಾರಸ್ಯಕರ ಪ್ರಶ್ನೆ ಇಂದು ವಿಧಾನಸಭೆ ಕಲಾಪ ನಡೆಯುತ್ತಿರುವಾಗ ಮೂಡಿತು, ಈ ಸಂದರ್ಭದಲ್ಲಿ ಸದನ ಕ್ಷಣಕಾಲ ನಗೆಗಡಲಿನಲ್ಲಿ ತೇಲಿತು. ಬಲವಂತದ ಮತಾಂತರ ನಿಷೇಧ ಮಸೂದೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಉದಾಹರಣೆ ನೀಡುವಾಗ ಮಾತಿನ ಭರದಲ್ಲಿ ಬಲವಂತದ ಮತಾಂತರ ಅನ್ನೋದು ಮದುವೆಗೆ ಸಂಬಂಧಿಸಿರಲಿಲ್ಲ ನಾನು ಲವ್ ಮಾಡಿ ಒಬ್ಬರನ್ನು ಮದುವೆ ಆಗುತ್ತೇನೆ ಎಂದು ಉದಾಹರಣೆ ಮೂಲಕ ಉತ್ತರಿಸಲು ಸಿದ್ದರಾಮಯ್ಯ ಆರಂಭಿಸಿದಾಗ ಇಡೀ ಸದನ ನಗಲು ಆರಂಭಿಸಿತು. ಆಗ ಸದಸ್ಯರ ನಗುವಿಗೆ ತಮ್ಮ ಮಾತನ್ನು ಸರಿಪಡಿಸಿಕೊಂಡು ಮಾತನಾಡಿದ ಸಿದ್ದರಾಮಯ್ಯ ಯಾವುದೋ ಒಂದು ಹುಡುಗ ಹುಡುಗಿಯನ್ನು ಪ್ರೀತಿಸಿ ಮದುವೆಯಾದಾಗ ಎಂದು ತಿದ್ದಿಕೊಂಡರು ಆಗ ಸಭಾಧ್ಯಕ್ಷರು, ವಯಸ್ಸಿಗೂ ಮತ್ತು ಪ್ರೀತಿಗೂ ಆಂತರಿಕ ಸಂಬಂಧ ಇಲ್ಲವೇ ಎಂದು ಪ್ರಶ್ನೆ ಮಾಡಿದರು. ಆಗ, ಸಿದ್ದರಾಮಯ್ಯ ಇಲ್ಲ, ಪ್ರೀತಿ ಹಾಗೂ ಮದುವೆ ಎರಡು ಬೇರೆ ಬೇರೆ ಎಂದು ಹೇಳಿದರು. ಯಾವ ವಯಸ್ಸಲ್ಲಾದ್ರೂ ಪ್ರೀತಿ ಮಾಡಬಹುದು ಎಂದು ಹೇಳಿದರು.

ಆಗ ವಿರೋಧ ಪಕ್ಷದ ನಾಯಕರೇ ನಿಮಗೆ ವಯಸ್ಸಾಗಿದೆ ಎಂದು ಹೇಳಿದವರು ಯಾರು? ನಿಮ್ಮ ಮನೆಯವರು ಹೇಳಿಲ್ಲ ತಾನೇ ಎಂದು ಸಚಿವ  ಈಶ್ವರಪ್ಪ ಹಾಸ್ಯ ಮಾಡಿದರು. ಆಗ ಸಿದ್ದರಾಮಯ್ಯ ಇಲ್ಲ,  ನಮ್ಮ ಮನೆಯವರು ಹೇಳಿಲ್ಲ.  ನಾನೇ ಅನ್ಕೊಂಡಿದ್ದೇನೆ. ನಿನಗೇನಾದ್ರೂ ಅನ್ಸಿದಿಯಾ ಎಂದು ಈಶ್ವರಪ್ಪಗೆ ಮರಳಿ ಪ್ರಶ್ನೆ ಮಾಡಿದ್ರು. ಯಾವುದೇ ಕಾರಣಕ್ಕೂ ನನಗೆ ಅನಿಸಿಲ್ಲ ಎಂದು ಈಶ್ವರಪ್ಪ ಹೇಳಿದರು. ವಯಸ್ಸು ಯಾವಾಗಲೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ

ಒಬ್ಬ ಹುಡುಗ ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಇದನ್ನು ಸಂವಿಧಾನದ ಆರ್ಟಿಕಲ್ 21 ಮತ್ತು 25 ಅನುಮತಿಸಿದೆ. ಇದಕ್ಕೆ ಅಡ್ಡಿ ಬರಲು ಯಾರು ನೀವು?  ಇದನ್ನೇ ಗುಜರಾತ್ ನಲ್ಲಿ ಕೋರ್ಟ್‌ ಪ್ರಶ್ನೆ ಮಾಡಿ ಗುಜರಾತ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಹೇಳಿದರು. ಇದು ಪ್ರೀತಿಸುವವರ ಹಕ್ಕು. ನಾವು ಯಾರು ಪ್ರಶ್ನೆ ಮಾಡುವವರು ಎಂದು ಹೇಳಿ ಕೋರ್ಟ್ ತಡೆಹಿಡಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES