ಭಾರತ ಸಂವಿಧಾನದ ಪರಿಚ್ಛೇದ 26 ರ ಅನ್ವಯದಂತೆ ಸಿದ್ಧಗೊಂಡಿರುವ ವಿಧೇಯಕ ಇದಾಗಿದೆ. ಯಾವುದೇ ವ್ಯಕ್ತಿ ಅಥವಾ ಜನ ಸಮುದಾಯವನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಹಾಗೂ ಮತಾಂತರ ಬಯಸುವ ವ್ಯಕ್ತಿ ಜಿಲ್ಲಾಧಿಕಾರಿಗೆ ಎರಡು ತಿಂಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಮತಾಂತರ ಪ್ರಕ್ರಿಯೆ ನಡೆಸಬೇಕಾದರೂ ಸಹ ಜಿಲ್ಲಾಧಿಕಾರಿಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಬಲವಂತದ ಮತಾಂತರ ಹಾಗು ಮತಾಂತರ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದೆ.
ಬಂಧಿತ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಇಲ್ಲದಂತೆ, ಜಾಮೀನುರಹಿತ ಅಂತ ಪರಿಗಣಿಸಲಾಗುವುದು. ಅಲ್ಲದೇ ಮತಾಂತರಗೊಳ್ಳುವ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡ, ಪ್ರಾರ್ಥನಾ ಕೇಂದ್ರಗಳಲ್ಲಿ ಮಾಡುವಂತಿಲ್ಲ. ಪ್ರೀತಿಸಿ ಬಳಿಕ ವಿವಾಹ ಆಗಿ ನಂತರ ಮತಾಂತರ ಮಾಡುವುದಕ್ಕೂ ಕಡಿವಾಣ ಹಾಕುವ ಸಾಧ್ಯತೆ ಇದೆ. ಮತಾಂತರ ಆಗುವ ಕುಟುಂಬದ ಯಾವುದೇ ವ್ಯಕ್ತಿ ತಕರಾರು ಇದ್ದರೆ,ಕೂಡಲೇ ಜಿಲ್ಲಾಧಿಕಾರಿಗೆ ತಿಳಿಸಬೇಕು.
ಡಿಸಿ ಅದರ ಸತ್ಯಾಸತ್ಯತೆ ತಿಳಿದು ಪರ್ಮಿಶನ್ ಕೊಡಬೇಕೊ ಬೇಡವೊ ಎಂಬುದನ್ನು ತೀರ್ಮಾನ ಮಾಡುತ್ತಾರೆ. ಎಸ್‌ಸಿ ವ್ಯಕ್ತಿ ಮತಾಂತರ ಆದರೆ, ಆ ವ್ಯಕ್ತಿಗೆ ಮೀಸಲಾತಿ ಆಧಾರದಲ್ಲಿ ಸಿಗುವ ಸರ್ಕಾರಿ ಸೇವೆಗಳು ಕಡಿತವಾಗುವುದು.ಮತ್ತು ಕಾನೂನು ಬಾಹಿರವಾಗಿ ಮತಾಂತರ ಮಾಡಿದವರನ್ನು 1-5 ವರ್ಷ ಸೆರೆಮನೆ ವಾಸ ಶಿಕ್ಷೆ ವಿಧಿಸಲಾಗುತ್ತದೆ. ಬಲವಂತದಿಂದ ಮತಾಂತರಗೊಂಡವರು ಮೈನರ್, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ್ದರೆ ಶಿಕ್ಷೆ ಪ್ರಮಾಣ ಗರಿಷ್ಠ 10 ವರ್ಷವಾಗುವುದು.