ಬೆಳಗಾವಿ : ಇಂದಿನ ಸದನದಲ್ಲಿ ಮತಾಂತರ ನಿಷೇಧ ಕಾಯ್ದೆಯ ಗದ್ದಲವನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಸುವರ್ಣಸೌಧದ ಒಳಗೆ ಬರದಂತೆ ಸ್ಪೀಕರ್ ಕಾಗೇರಿ ಅವರು ನಿರ್ಬಂಧ ಹೇರಿದ್ದರು.
ಮತಾಂತರ ನಿಷೇಧ ಕಾಯ್ದೆಯು ಹೀಗಾಗಲೇ ಸಾಕಷ್ಟು ಚರ್ಚೆಗೆ ಒಳಪಟ್ಟಿದ್ದು, ಅಲ್ಲದೇ ನೆನ್ನೆ ನಡೆದ ಸದನದಲ್ಲಿ ಮತಾಂತರ ಕಾಯ್ದೆಯನ್ನು ಕದ್ದುಮುಚ್ಚಿ ಮಂಡಿಸಿದ್ದರು ಎಂದು ವಿಪಕ್ಷ ನಾಯಕರುಗಳು ವಾಗ್ದಳಿ ನಡೆಸಿದ್ದರು. ಹಾಗೂ ಎರಡು ಪಕ್ಷದ ನಡುವೆ ಗಲಾಟೆ ಕೂಡ ಆಗಿತ್ತು.
ಆದರೆ ಇಂದು ಸುವರ್ಣಸೌಧದಲ್ಲಿ ನಡೆಯುವ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆಯ ಬಿಲ್ ಪಾಸಾಗುವ ಸಂದರ್ಭದಲ್ಲಿ ವಿರೋಧ ಪಕ್ಷವಾದ ಕಾಂಗ್ರೇಸ್ ಗಲಾಟೆಯನ್ನು ಪ್ರಾರಂಭಿಸುವುದು. ಈ ವೇಳೆ ವಿಪಕ್ಷಗಳ ಗದ್ದಲ ಚಿತ್ರೀಕರಣ ಮಾಡದಂತೆ ಮಾಧ್ಯಮ ಪ್ರತಿನಿಧಿಗಳನ್ನ ಒಳಗೆ ಬಿಡದಂತೆ ಪೊಲೀಸರಿಗೆ ಸ್ಪೀಕರ್ ಕಾಗೇರಿ ಆದೇಶ ನೀಡಿದ್ದರು. ಎಂದು ಸುವರ್ಣಸೌಧದ ಕಾರಿಡಾರ್ ಒಳಗೆ ಕ್ಯಾಮರಾ ಕೂಡ ಪ್ರವೇಶಿಸದಂತೆ ತಡೆ ಹಿಡಿದಿದ್ದರು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಯು.ಟಿ.ಖಾದರ್ ಅವರು ಬಿಜೆಪಿ ಸರ್ಕಾರವು ಮಾಧ್ಯಮಗಳ ದಬ್ಬಾಳಿಕೆ ನಡೆಸುತ್ತಿದೆ.
ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವದ ವಿರೋಧಿ ಕೆಲಸ ಮಾಡುತ್ತಿದೆ. ಅಲ್ಲದೇ ಮತಾಂತರ ನಿಷೇಧ ಕಾಯ್ದೆ ಮಂಡನೆಯನ್ನು ಸಹ ಕದ್ದು ಮುಚ್ಚಿ ಮಾಡಿದ್ದರು. ರಾಜ್ಯದಲ್ಲಿ ಸರ್ವಾಧಿಕಾರ ಧೋರಣೆ ಸರಿಯಲ್ಲ ಎಂದು ಕಿಡಿಕಾರಿದರು. ಹಾಗೂ ಇವತ್ತು ಬೆಳಗ್ಗೆ ಮಾಧ್ಯಮಗಳನ್ನ ನಿರ್ಬಂಧಿಸಿದ್ದಾರೆಂದು ಸುವರ್ಣಸೌಧದ ಬಳಿ ಮಾಜಿ ಸಚಿವ ಯು.ಟಿ.ಖಾದರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.