Monday, December 23, 2024

ಇತಿಹಾಸ ಸೃಷ್ಟಿಸಿದ ಕಿಡಂಬಿ ಶ್ರೀಕಾಂತ್​​​​

ಸ್ಪೇನ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರ ವಿಶ್ವ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿದೆ. ಸ್ಪೇನ್‌ನ ಹುಯೆಲ್ವಾದಲ್ಲಿ ಭಾನುವಾರ ನಡೆದ BWF ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೀಕಾಂತ್ ಅವರನ್ನು 21-14, 21-20 ರಿಂದ ಸಿಂಗಾಪುರದ ಕೀನ್ ಯೆವ್ ಲೋಹ್ ಮಣಿಸಿ ಪ್ರಶಸ್ತಿಯನ್ನು ಗೆದ್ದರು.

ಈ ಮೂಲಕ ಭಾರತ ಎರಡನೇ ವಿಶ್ವ ಚಾಂಪಿಯನ್ ಆಗುವ ಅವಕಾಶದಿಂದ ಹೊರಗುಳಿದಿತ್ತು. ಆದರೆ, ಈ ಸೋಲಿನ ನಡುವೆಯೂ ಕಿಡಂಬಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಸೆಮಿಫೈನಲ್​ನಲ್ಲಿ ಶ್ರೀಕಾಂತ್ ವಿರುದ್ಧ ಸೋತ ಯುವ ಆಟಗಾರ ಲಕ್ಷ್ಯ ಸೇನ್ ಕಂಚಿನ ಪದಕ ಗಳಿಸಿದರು.

RELATED ARTICLES

Related Articles

TRENDING ARTICLES