ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಹಾನಿ ವಿಚಾರವಾಗಿ ತಮ್ಮದೆ ಸರ್ಕಾರಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಟ್ವಿಟ್ರ ಮೂಲಕ ಮನವಿ ಮಾಡಿದ್ದಾರೆ.
ವ್ಯಕ್ತಿಗಳು ಪ್ರತಿಮೆಗಳಾಗುವುದು ಅವರ ನಿಷ್ಠೆ-ಪ್ರಾಮಾಣಿಕತೆ ಮತ್ತು ಬದ್ಧತೆಗಳಿಂದ. ವಿಚಿತ್ರ ಎಂದರೆ ಅವು ಯಾವೂ ಇಲ್ಲದೇ ಜನಗಳು ಅವರ ಸ್ವಾರ್ಥಕ್ಕಾಗಿ ಪ್ರತಿಮೆಗಳನ್ನು ವಿರೂಪ ಮಾಡ್ತಿದ್ದಾರೆ. ಹೇಳೋದು ಇಷ್ಟೇ, ಎಲ್ಲರೂ ಪ್ರತಿಮೆಗಳಾಗುವ ಎತ್ತರಕ್ಕೇರೋಣ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಗೆ ಕೃತ್ಯವೆಸಗಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹಾನಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಎಂಇಎಸ್ ಸಂಘಟನೆ ಬಗ್ಗೆ ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಬೆಳಗಾವಿಯಲ್ಲಿ ಹಾನಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಕನ್ನಡಧ್ವಜ ಸುಟ್ಟು ಸೌಹಾರ್ದತೆಗೆ ಭಂಗ ತರುವ ಯತ್ನ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಬೇಕು. ಇಂಥವರನ್ನು,
ಇಂಥ ದುಷ್ಕೃತ್ಯಗಳನ್ನು ಸರ್ಕಾರವು ಹತ್ತಿಕ್ಕಬೇಕೆಂದು ಮನವಿ ಮಾಡುತ್ತೇನೆ.— Pratap Simha (@mepratap) December 19, 2021
ಅಲ್ಲದೇ ಕನ್ನಡಧ್ವಜವನ್ನು ಸುಟ್ಟು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ. ಅಂತಹ ನಾಡದ್ರೋಹಿಗಳನ್ನು ಕೂಡಲೇ ಬಂಧಿಸಬೇಕು. ಇಂಥವರನ್ನು, ಹಾಗೂ ಇವರುಗಳು ಮಾಡುವ ದುಷ್ಕೃತ್ಯಗಳನ್ನು ಸರ್ಕಾರವು ತಕ್ಷಣವೇ ಹತ್ತಿಕ್ಕಬೇಕೆಂದು ಮನವಿ ಮಾಡುತ್ತೇನೆಂದು ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ.