Wednesday, January 22, 2025

ಕಾಂಗ್ರೆಸ್ ಅಂಬೇಡ್ಕರ್​ರವರನ್ನು ಅವಮಾನಿಸುತ್ತಿದೆ : ಸಚಿವ ಅಮಿತ್ ಶಾ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬದುಕಿದ್ದಾಗ ಮತ್ತು ಅವರ ಸಾವಿನ ನಂತರವೂ ಕಾಂಗ್ರೆಸ್ ಯಾವಾಗಲೂ ಅವರನ್ನು ಅವಮಾನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್​ ಶಾ ಸಂವಿಧಾನದ ದಿನವನ್ನು ಪರಿಚಯಿಸಿದವರು ಪ್ರಧಾನಿ ನರೇಂದ್ರ ಮೋದಿ ಅವರು, ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಆದರೆ, ಅಂಬೇಡ್ಕರ್ ಅವರು ಜೀವಂತವಾಗಿದ್ದಾಗ ಮತ್ತು ಅವರ ಮರಣದ ನಂತರವೂ ಅವರನ್ನು ಅವಮಾನಿಸಲು ಕಾಂಗ್ರೆಸ್ ಪಕ್ಷವು ಒಂದು ಕ್ಷಣವನ್ನು ಬಿಡಲಿಲ್ಲ ಎಂದು ಅಮಿತ್​ ಶಾ ಅವರು ಕಾಂಗ್ರೇಸ್​ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೇ ಅಂಬೇಡ್ಕರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಕಾಂಗ್ರೆಸ್ಸೇತರ ಸರ್ಕಾರದಿಂದ ನೀಡಲಾಯಿತು ಎಂದು ಅವರು ಹೇಳಿದರು. ಆದರೆ ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ‘ಸ್ಮೃತಿ ಸ್ಥಳ’ಗಳಾಗಿ ಪರಿವರ್ತಿಸಲಾಯಿತು.

ಅಂಬೇಡ್ಕರ್ ಅವರ ಪರಂಪರೆ ಹೆಚ್ಚು ಜನರನ್ನು ತಲುಪುತ್ತದೆ ಎಂಬ ಭಯದಿಂದ ಈ ಹಿಂದೆ ಸಂವಿಧಾನ್ ದಿವಸ್ ಅಥವಾ ಸಂವಿಧಾನ ದಿನವನ್ನು ಆಚರಿಸಲಾಗಲಿಲ್ಲ,ಎಂದು ಕಾಂಗ್ರೆಸ್ ವಿರುದ್ಧ ಶಾ ಆರೋಪ ಮಾಡಿದರು. ಆದರೆ ನರೇಂದ್ರ ಮೋದಿಜಿ ಪ್ರಧಾನಿಯಾದಾಗ ‘ಸಂವಿಧಾನ ದಿವಸ್’ ಆಚರಣೆಯನ್ನು ಪ್ರಾರಂಭ ಮಾಡಿದರು. ಅಂದಿನಿಂದ ಮೋದಿಜಿ ಸಂವಿಧಾನ್ ದಿವಸ್ ಆಚರಿಸಿದರೆ ಕಾಂಗ್ರೆಸ್ ಪಕ್ಷವು ವಿರೋಧಿಸುತ್ತಿತ್ತು, ಆದರೆ ಈಗ ಅದೇ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತದೆ.

RELATED ARTICLES

Related Articles

TRENDING ARTICLES