ಫಿಲಿಪೈನ್ಸ್: ಫಿಲಿಪೈನ್ಸ್ನಲ್ಲಿ ಪ್ರಬಲ ರೈ ಚಂಡಮಾರುತ ಅಪ್ಪಳಿಸಿದ್ದು, ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಈ ವರ್ಷ ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಪ್ರಬಲ ಚಂಡಮಾರುತದಲ್ಲಿ ಭಾರೀ ಸಾವು ನೋವು ಪ್ರಕರಣ ದಾಖಲಾಗಿದೆ. ತೀವ್ರ ಹಾನಿಗೊಳಗಾದ ದ್ವೀಪಗಳಿಗೆ ನೀರು & ಆಹಾರವನ್ನು ತಲುಪಿಸುವ ಪ್ರಯತ್ನಗಳು ತೀವ್ರಗೊಂಡಿವೆ.
ಚಂಡಮಾರುತದ ಪ್ರಭಾವದಿಂದ ಭಾರೀ ಗಾಳಿಯಿಂದ ಮನೆಯ ಚಾವಣಿಗಳು ಹಾರಿದ್ದು, ಪ್ರವಾಹದಲ್ಲಿ ಗ್ರಾಮಗಳು ಮುಳುಗಿ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಬಲ ಚಂಡಮಾರುತ ಅಪ್ಪಳಿಸುವ ಮೊದಲೇ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಮತ್ತು ಮಧ್ಯದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಮೊಬೈಲ್ ನೆಟ್‌ವರ್ಕ್ ಇಲ್ಲದೆ ಜನ ಸಂಪರ್ಕ ಕಳೆದುಕೊಂಡಿದ್ದಾರೆ.