ಬೆಂಗಳೂರು: ದೇಶದಲ್ಲಿ ಈಗಾಗಲೇ ಸಮುದಾಯಕ್ಕೆ ಹರಡಿದ್ಯಾ ಓಮಿಕ್ರಾನ್ ? ದೇಶದ ಹಲವು ರಾಜ್ಯದ ಒಮೈಕ್ರಾನ್ ಸಂಕ್ರಮಿತರ ಟ್ರಾವೆಲ್ ಹಿಸ್ಟರಿ ನೋಡಿದರೆ ಇದಕ್ಕೆ ಹೌದು ಎನ್ನಬೇಕಾಗುತ್ತದೆ. ಬೆಂಗಳೂರಿನ ಮೊದಲ ಎರಡು ಕೇಸ್ ಪೈಕಿ ಒಬ್ಬರಿಗೆ ಇರಲಿಲ್ಲ ಟ್ರಾವೆಲ್ ಹಿಸ್ಟರಿ. ಡಿಸೆಂಬರ್ 17 ರಂದು ಪತ್ತೆಯಾದ ಎರಡು ಕೇಸ್ಗಳು ಕೇವಲ ದೆಹಲಿ ಟ್ರಾವೆಲ್ ಹಿಸ್ಟರಿ ಹೊಂದಿದ್ದವು.
ನಿನ್ನೆ ಮಂಗಳೂರಿನಲ್ಲಿ ಪತ್ತೆಯಾದ ಕೇಸ್ಗಳಿಗೂ ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲ. ಹೀಗಾಗಿ ದೇಶದಲ್ಲಿ ಈಗಾಗಲೇ ಕಮ್ಯನಿಟಿ ಲೆವೆಲ್ಗೆ ಓಮಿಕ್ರಾನ್ ಹರಡಿದ್ಯಾ ಎಂಬ ಸಂಶಯ ತಜ್ಷರಿಂದ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾಗ್ತಿರೋ ಕೇಸ್ ಗಳಿಗೂ ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಇಡೀ ದೇಶದಲ್ಲಿ ಒಮೈಕ್ರಾನ್ ಸಮುದಾಯ ಲೆವಲ್ಲಿಗೆ ಹರಡಿರುವ ಸಾಧ್ಯತೆಯನ್ನು ತೋರುತ್ತಿದೆ.
ಹೀಗೆ ರಾಜ್ಯದಲ್ಲಿ ಒಮೈಕ್ರಾನ್ ಸ್ಫೋಟಗೊಳ್ಳುತ್ತಿರುವುದರಿಂದ ಕರ್ನಾಟಕ ದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಡಿಸೆಂಬರ್ 30 ರಿಂದ ಜನವರಿ2 ವರಿಗೆ ನೈಟ್ ಕರ್ಫ್ಯೂ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಹೊಸ ವರ್ಷಾಚರಣೆ ವೇಳೆ ಜನದಟ್ಟಣೆ ನಿಯಂತ್ರಿಸಲು ನೈಟ್ ಕರ್ಫ್ಯೂ ಗೆ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ. ದೇವಾಲಯ, ಚರ್ಚ್ ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರಕ್ಕೂ ನಿರ್ಬಂಧ ಹಾಕಲು ಸರ್ಕಾರ ಪ್ಲ್ಯಾನ್ ನಡೆಸಿದೆ.
ಡಿಸೆಂಬರ್22 ರಿಂದ ರಿಂದ ಜನವರಿ2 ತನಕ ಧಾರ್ಮಿಕ ಕೇಂದ್ರಕ್ಕೆ 50-50 ರೂಲ್ಸ್ ಮಾಡುವ ಸಂಭವವಿದೆ. ಪಬ್ ,ಬಾರ್,ಕ್ಲಬ್, ರೆಸ್ಟೋರೆಂಟ್ ನಿರ್ಬಂಧ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಆಚರಣೆಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಒಮೈಕ್ರಾನ್ ಕೇಸ್ ಹೆಚ್ಚಳ ಹಿನ್ನಲೆ ಕ್ರಿಸ್ಮಸ್ ಹಬ್ಬ ಆಚರಣೆಗೂ ಟಫ್ ರೂಲ್ಸ್ ಹೇರುವ ಸಂಭವವಿದೆ ಎನ್ನಲಾಗಿದೆ. ಈ ಎಲ್ಲ ವಿಷಯಗಳ ಕುರಿತು ಶೀಘ್ರದಲ್ಲೇ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದೆ.