Saturday, January 4, 2025

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಮಂಡ್ಯ: ಮಂಡ್ಯದ ಬಡಾವಣೆಯೊಂದರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಟಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಮಂಡ್ಯದ ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಟ್ಯ್ರಾಕ್ ಬಳಿ ಘಟನೆ ನಡೆದಿದೆ.  ರಕ್ಷಿತ್ @ ರಕ್ಷಿ (21) ಕೊಲೆಯಾಗಿರುವ ಯುವಕ.  ಕೊಲೆಯಾದ ರಕ್ಷಿತ್, ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿ.

ಮಂಡ್ಯದಲ್ಲಿ ತಡರಾತ್ರಿ ನಡೆದಿರುವ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬರ್ಬರ ಹತ್ಯೆ ಮಾಡಲಾಗಿದೆ.  ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ  ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES