Thursday, January 23, 2025

ಅಂಡಮಾನ್​ನಲ್ಲಿ ಕೊವಿಡ್ ಶೇಕಡ 100 ರಷ್ಟು ಲಸಿಕೆ

ಅಂಡಮಾನ್: ಕೊವಿಡ್ ಲಸಿಕೆಯ ಎರಡೂ ಡೋಸ್ ವಿತರಣೆಯಲ್ಲಿ ಅಂಡಮಾನ್ ಹಾಗೂ ನಿಕೋಬರ್ ದ್ವೀಪದಲ್ಲಿ ಶೇ.100 ರಷ್ಟು ಗುರಿ ಸಾಧನೆಯಾಗಿದೆ. ಈ ಮೂಲಕ ಸಂಪೂರ್ಣ ಲಸಿಕೆ ಅಭಿಯಾನ ಹಮ್ಮಿಕೊಂಡ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಸಕ್ತ ವರ್ಷಾರಂಭದಲ್ಲಿ ಜನವರಿ 16ರಂದು ಲಸಿಕೆ ಅಭಿಯಾನವು ಆರಂಭಗೊಂಡಿತು. ಸಂಪೂರ್ಣವಾಗಿ ಕೋವಿಶೀಲ್ಡ್ ಲಸಿಕೆ ವಿತರಿಸಿ ಈ ಸಾಧನೆಗೈದಿದೆ. ಅಂಡಮಾನ್‌‌ನಲ್ಲಿ ಕೊವಿಡ್ ಲಸಿಕೆ ವಿತರಣೆ ಅಭಿಯಾನವು ಅಷ್ಟು ಸುಲಭವಾಗಿರಲಿಲ್ಲ. ಉತ್ತರದಿಂದ ದಕ್ಷಿಣಕ್ಕೆ 800 ಕಿ.ಮೀ.ಗಳಷ್ಟು ದೂರದಲ್ಲಿ 836 ದ್ವೀಪಗಳಲ್ಲಿ ಹರಡಿಕೊಂಡಿರುವ ಕೇಂದ್ರಾಡಳಿತ ಪ್ರದೇಶದ ಕೊವಿಡ್ ಲಸಿಕೆ ವಿತರಣೆಯು ಅತ್ಯಂತ ಸವಾಲಿನಿಂದ ಕೂಡಿತ್ತು ಎಂದು ಅಲ್ಲಿನ ಆಡಳಿತವು ತಿಳಿಸಿದೆ.

RELATED ARTICLES

Related Articles

TRENDING ARTICLES