Wednesday, January 22, 2025

ತಲೆಹೊಟ್ಟಿನ ಬಗ್ಗೆ ನಿಮಗೆಷ್ಟು ಗೊತ್ತು?

ಚಳಿಗಾಲದಲ್ಲಿ ಈ ತಪ್ಪುಗಳಿಂದ ತಲೆಹೊಟ್ಟು ಹೆಚ್ಚಾಗಬಹುದು

ಚಳಿಗಾಲದಲ್ಲಿ ಅತಿಯಾಗಿ ಸ್ಕಿನ್ ಬಗ್ಗೆ ಕಾಳಜಿ ವಹಿಸಲು ಹೋಗಿ ಕೂದಲ ಬಗ್ಗೆ ಅತಿ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ.  ಚಳಿಗಾಲದಲ್ಲಿ ಕೂದಲ ಕಾಳಜಿ ವಹಿಸದೇ ಇರೋದ್ರಿಂದ ತಲೆಯಲ್ಲಿ ಒಟ್ಟು ಜಾಸ್ತಿಯಾಗಿ ಕೂದಲು ಉದುರೋದಕ್ಕೆ ಕಾರಣವಾಗುತ್ತಿದೆ. ಶೀತ ವಾತಾವರಣದಲ್ಲಿ ಕೂದಲಿಗೆ ವಿಶೇಷ ಕಾಳಜಿ ಬೇಕು. ಈ ಋತುವಿನಲ್ಲಿ, ಕೂದಲು ತನ್ನ ಹೊಳಪನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಕೂದಲು ಉದುರುವಿಕೆ, ತಲೆಹೊಟ್ಟು ಜಾಸ್ತಿಯಾಗುತ್ತದೆ. ಮತ್ತೊಂದೆಡೆ, ತಂಪಾದ ಗಾಳಿಯು ನಿಮ್ಮ ಕೂದಲಿನ ತೇವಾಂಶವನ್ನು ಕಸಿದುಕೊಳ್ಳಬಹುದು ಮತ್ತು ಅವುಗಳನ್ನು ನಿರ್ಜೀವಗೊಳಿಸಬಹುದು. ತಲೆಹೊಟ್ಟು ಮತ್ತು ಕೂದಲು ಉದುರುವುದನ್ನು ತಪ್ಪಿಸಲು, ಶೀತ ಕಾಲದಲ್ಲಿ ತಿಳಿಯದೆ ಮಾಡುವ ಕೆಲವು ತಪ್ಪುಗಳನ್ನು ತಪ್ಪಿಸಬೇಕು. ತಲೆಹೊಟ್ಟು ಮತ್ತು ಕೂದಲು ಉದುರುವುದನ್ನು ತಪ್ಪಿಸಲು ಆಯುರ್ವೇದದಲ್ಲಿ ಸಾಕಷ್ಟು ಉಪಯುಕ್ತವಾಗುವ ಮಾಹಿತಿಯ ಜೊತೆಗೆ ಶೀತ ಋತುವಿನಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ.

ಚಳಿಗಾಲದಲ್ಲಿ ಕೂದಲಿಗೆ ಸಂಬಂಧಿಸಿದ ಈ ತಪ್ಪುಗಳನ್ನು ಮಾಡಬೇಡಿ..!

ಚಳಿಗಾಲದಲ್ಲಿ ಹೆಚ್ಚಿನ ಸಮಯ ಕೂದಲಿಗೆ ಎಣ್ಣೆ ಹಚ್ಚುವುದರಿಂದ ತಲೆಹೊಟ್ಟು ಚರ್ಮದ ಮೇಲೆ ನೆಲೆಗೊಳ್ಳಬಹುದು. ಇದರೊಂದಿಗೆ, ಇದು ಧೂಳು ಮತ್ತು ಕೊಳೆಯನ್ನು ಎಳೆಯಬಹುದು. ಅಂತಹ ಪರಿಸ್ಥಿತಿಯಲ್ಲಿ ಸ್ನಾನ ಮಾಡುವ ಒಂದು ಅಥವಾ ಎರಡು ಗಂಟೆಗಳ ಮೊದಲು ಎಣ್ಣೆಯನ್ನು ಹಚ್ಚಿ ನಂತರ ಶಾಂಪೂ ಮಾಡಿ. ನಂತರ ಕೂದಲನ್ನು ಒದ್ದೆಯಾಗಿ ಕಟ್ಟಬೇಡಿ. ಸಂಪೂರ್ಣವಾಗಿ ಒಣಗಿದ ನಂತರ, ಕೂದಲನ್ನು ಕಟ್ಟಿಕೊಳ್ಳಿ. ರಾತ್ರಿಯಿಡೀ ಎಣ್ಣೆ ಹಚ್ಚಿ ಮಲಗುತ್ತಿದ್ದರೆ ಅದನ್ನ ಮೊದಲು ತಪ್ಪಿಸಿ.

ಉತ್ತಮವಾದ ಕೂದಲು  ಬೇಕು ಅಂದ್ರೆ ಸರಿಯಾಗಿ ಶುಚಿಗೊಳಿಸುವುದು ಅತ್ಯಗತ್ಯ. ಆದರೆ ಪ್ರತಿದಿನವೂ ಅತಿಯಾದ ಶಾಂಪೂ ನಿಮ್ಮ ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಪ್ರತಿದಿನ ಶಾಂಪೂ ಮಾಡುವುದನ್ನು ತಪ್ಪಿಸಿ. ಅತಿಯಾಗಿ ಶಾಂಪೂ ಹಾಕುವುದರಿಂದ ತಲೆಹೊಟ್ಟು ಒಣಗಿ ಜಾಸ್ತಿ ಮಾಡಬಹುದು, ಇದರಿಂದ ನೀವು ತುರಿಕೆ, ಕೂದಲು ಉದುರುವಿಕೆ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಾಗಬಹುದು.

ಚಳಿಗಾಲದಲ್ಲಿ, ಹೆಚ್ಚಿನ ಜನರು ತಮ್ಮ ತಲೆಯನ್ನು ತೊಳೆಯಲು ಉಗುರು ಬೆಚ್ಚಗಿನ ನೀರನ್ನು ಬಳಸುತ್ತಾರೆ, ಇದರಿಂದಾಗಿ ನಿಮ್ಮ ಕೂದಲಿನ ಬೇರುಗಳು ತೆರೆದುಕೊಳ್ಳಬಹುದು, ಆದ್ದರಿಂದ ಒದ್ದೆಯಾದ ಕೂದಲನ್ನು ಬಾಚಿಕೊಳ್ಳುವುದನ್ನು ತಪ್ಪಿಸಿ. ಸಾಧ್ಯವಾದರೆ, ಕೂದಲು ಒಣಗಿದ ನಂತರವೇ ಬಾಚಿಕೊಳ್ಳಿ. ಸಾಮಾನ್ಯವಾಗಿ ಜನರು ತಿಳಿದೋ ತಿಳಿಯದೆಯೋ ಕೂದಲ ಆರೈಕೆಗೆ ಸಂಬಂಧಿಸಿದಂತೆ ಅನೇಕ ತಪ್ಪುಗಳನ್ನು ಮಾಡುತ್ತಾರೆ, ಹಾಗೆ- ಹೆಚ್ಚಿನ ಜನರು ಒದ್ದೆಯಾದ ಕೂದಲನ್ನು ತ್ವರಿತವಾಗಿ ಒಣಗಿಸಲು ಹೇರ್ ಡ್ರೈಯರ್ ಅನ್ನು ಬಳಸುತ್ತಾರೆ, ಹೇರ್​​ಡ್ರೈಯರ್​​​ ಅನ್ನು ಬಳಸೋದ್ರಿಂದ ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ. ನೀವು ಪ್ರತಿದಿನ ಈ ತಪ್ಪನ್ನು ಮಾಡುತ್ತಿದ್ದರೆ, ಜಾಗರೂಕರಾಗಿರಿ.

ಕೂದಲಿಗೆ ಆಯುರ್ವೇದ ಸಲಹೆಗಳು

ಪ್ರತಿದಿನ ಆಮ್ಲಾ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ, ಇದು ನಿಮ್ಮ ಕೂದಲಿಗೆ ಮತ್ತು ನಿಮ್ಮ ಚರ್ಮ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆಮ್ಲಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕೂದಲಿಗೆ ರಾಮಬಾಣವಾಗಿದೆ. ಪ್ರತಿದಿನ ಬೆಳಗ್ಗೆ ಒಂದು ನೆಲ್ಲಿಕಾಯಿ ತಿನ್ನಿ. ಆಮ್ಲಾವನ್ನು ಒಣಗಿಸಿ ನಿಮ್ಮ ಕೂದಲಿಗೆ ಹಚ್ಚಿರಿ. ಅಲ್ಲದೆ ಬೆಳಿಗ್ಗೆ ಆಮ್ಲಾ ಜ್ಯೂಸ್ ಕುಡಿಯುವುದು ಕೂದಲಿಗೆ ಪ್ರಯೋಜನಕಾರಿಯಾಗಿದೆ.

ಆಯುರ್ವೇದದಲ್ಲಿ ಎಳ್ಳನ್ನು ಕೂದಲಿನ ಆರೋಗ್ಯಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಪೋಷಕಾಂಶಗಳಿಂದ ಕೂಡಿದ ಎಳ್ಳು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುವುದರ ಜೊತೆಗೆ ಮೃದುವಾಗಿಸಲು ಸಹಾಯ ಮಾಡಿ ನಿಮ್ಮ ಕೂದಲನ್ನು ಬಲಪಡಿಸುತ್ತದೆ. ಎಳ್ಳಿನ ನಿಯಮಿತ ಸೇವನೆಯು ಕೂದಲು ಉದುರುವಿಕೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನವರು ತಿನ್ನಲು ಇಷ್ಟಪಡುವವರು ಎಳ್ಳಿನ ಲಡ್ಡು, ಮತ್ತು ಚಿಕ್ಕಿನುಂಡೆ ಅನ್ನು ಪ್ರತಿನಿತ್ಯವು ಸೇವಿಸಬಹುದು.

ಇತ್ತೀಚೆಗೆ ಹೆಚ್ಚಿನ ಮಹಿಳೆಯರು ಫ್ಯಾಶನ್​​ ಎನ್ನುವ ಹೆಸರಿನಲ್ಲಿ ತಮ್ಮ ಕೂದಲ ಹಾರೈಕೆಯನ್ನೇ ಮರೆತು ಬಿಟ್ಟಿದ್ದಾರೆ. ಕೂದಲಿಗೆ ಎಣ್ಣೆ ಬಹಳ ಮುಖ್ಯ. ವಾರಕ್ಕೆ ಒಮ್ಮೆಯಾದರೂ ಕೂದಲಿಗೆ ಎಣ್ಣೆ ಹಾಕಿದರೆ ಒಳಿತು.  ದೇಹದಂತೆಯೇ ಕೂದಲಿಗೆ ವಿಶೇಷ ಪೋಷಣೆಯ ಅವಶ್ಯಕತೆಯಿದೆ, ಆದ್ದರಿಂದ ಎಣ್ಣೆಯನ್ನು ಅನ್ವಯಿಸಿ. ಚಳಿಗಾಲದಲ್ಲಿ ಸ್ನಾನ ಮಾಡುವ ಒಂದು ಅಥವಾ ಎರಡು ಗಂಟೆಗಳ ಮೊದಲು ಕೂದಲಿಗೆ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ.ಆಯುರ್ವೇದದ ಪ್ರಕಾರ ವಾರಕ್ಕೆ ಒಂದು ಅಥವಾ ಎರಡು ಬಾರಿ ಎಣ್ಣೆಯನ್ನು ಹಚ್ಚಬೇಕು.

ಬೆಲ್ಲದಿಂದ ಕೂಡ ಕೂದಲಿಗೆ ತುಂಬಾ ಪ್ರಯೋಜನಕಾರಿ ಇದೆ ಅನ್ನೋದು ಅದೆಷ್ಟೋ ಮಂದಿಗೆ ಗೊತ್ತಿಲ್ಲ ಬೆಲ್ಲವು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ. ಚಳಿಗಾಲದಲ್ಲಿ ಬೆಲ್ಲದ ಸೇವನೆ ಅತಿ ಮುಖ್ಯ. ಬೆಲ್ಲವು ಜೀರ್ಣಕ್ರಿಯೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ, ಬೆಲ್ಲವು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ. ಕಬ್ಬಿಣ, ಕ್ಯಾಲ್ಸಿಯಂ, ಸತು, ತಾಮ್ರ, ಗ್ಲೈಕೋಲಿಕ್ ಆಮ್ಲದ ಸಮೃದ್ಧವಾಗಿರುವ ಬೆಲ್ಲವು ಕೂದಲಿಗೆ ತುಂಬಾ ಒಳ್ಳೆಯದು.

ಚಳಿಗಾಲದಲ್ಲಿ, ತುಪ್ಪವು ನೈಸರ್ಗಿಕ ರೀತಿಯಲ್ಲಿ ಹೊಟ್ಟೆ ಮತ್ತು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಕೂದಲು ಉದುರುವುದನ್ನು ತಡೆಯಲು ಕೂದಲಿಗೆ ತುಪ್ಪದ ಮಸಾಜ್ ಪ್ರಯೋಜನಕಾರಿ. ತುಪ್ಪದಲ್ಲಿರುವ ಪೋಷಕಾಂಶಗಳು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಸ್ನಾನ ಮಾಡುವ ಒಂದು ಗಂಟೆಯ ಮುಂಚೆ ತುಪ್ಪದಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿ,ಆನಂತರ ಶಾಂಪೂವಿನಿಂದ ಕೂದಲನ್ನು ತೊಳೆದರೆ, ನಿಮ್ಮ ಕೂದಲು ಹೊಳೆಯುತ್ತದೆ.

R.ರಮ್ಯ, ಪವರ್ ಟಿವಿ

RELATED ARTICLES

Related Articles

TRENDING ARTICLES