Thursday, December 19, 2024

ಇಂದು ದತ್ತ ಜಯಂತಿ

ಚಿಕ್ಕಮಗಳೂರು: ದತ್ತ ಪೀಠದಲ್ಲಿ ಇಂದು ದತ್ತ ಜಯಂತಿ ಹಿನ್ನೆಲೆ ದತ್ತ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಿರುವ  ದತ್ತ ಮಾಲಾಧಾರಿಗಳುಬೆಳಗ್ಗೆ 8 ಗಂಟೆಯಿಂದ ದತ್ತ ಪಾದುಕ್ಕೆ ದರ್ಶನ ಮಾಡುತ್ತಿದ್ದಾರೆ.

ಹೀಗೆ ದತ್ತಪೀಠಕ್ಕೆ ಬರುತ್ತಿರುವವರಲ್ಲಿ ಸಿ.ಟಿ.ರವಿ ಸಹ ಸೇರಿದ್ದಾರೆ. ಹೊನ್ನಮ್ಮನಹಳ್ಳದಿಂದ ಪಾದಯಾತ್ರೆ ಮೂಲಕ ದತ್ತಪೀಠಕ್ಕೆ ತೆರಳಿದ್ದಾರೆ  ಸಿ.ಟಿ ರವಿ. ದತ್ತ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ಮದ್ಯದಂಗಡಿಗಳು ಬಂದ್ ಆಗಿವೆ. ದತ್ತಪೀಠಕ್ಕೆ ತೆರಳುವ ಮುಖ್ಯರಸ್ತೆಯಲ್ಲಿನ ಅಂಗಡಿ-ಮುಂಗಟ್ಟುಗಳೂ ಸಹ ಬಂದ್ ಆಗಿವೆ.

RELATED ARTICLES

Related Articles

TRENDING ARTICLES