Tuesday, October 22, 2024

ಪ್ರಧಾನಿ ಮೋದಿಗೆ ಪ್ರಶಸ್ತಿ ನೀಡಿ ಗೌರವಿಸಿದ ಭೂತಾನ್

ಭಾರತ ಹಾಗು ಭೂತಾನ್​ ಐತಿಹಾಸಿಕ ಹಾಗು ಪೌರಾಣಿಕ ಹಿನ್ನೆಲೆಯಿಂದ ಅತ್ಯಾಪ್ತ ರಾಷ್ಟ್ರಗಳು, ಬೌದ್ಧ ದರ್ಮದ ಕಾಲದಿಂದಲೂ ಭಾರತದೊಂದಿಗೆ ಧಾರ್ಮಿಕ ಸಂಬಂಧ ಹೊಂದಿರುವ ಈ ರಾಷ್ಟ್ರ, ಭಾರತಕ್ಕೆ ಅತ್ಯಾಪ್ತ ಮಿತ್ರ. ಈ ರಾಷ್ಟ್ರದ ಮೇಲೆ ಒಂದು ಕಾಲದಲ್ಲಿ ಚೀನಾ ಹಿಡಿತ ಸಾಧಿಸೋದಕ್ಕೆ ಕೂಡ ಪ್ರಯತ್ನ ಪಟ್ಟಿತ್ತು ಆದ್ರೆ ಅದು ಯಶಸ್ವಿಯಾಗಿರಲಿಲ್ಲ. ಹಾಗಾಗಿ ಮೊದಲೇ ಚೀನಾದ ನರಿ ಬುದ್ಧಿಯನ್ನ ಅರ್ಥ ಮಾಡಿಕೊಂಡಿದ್ದ ಭೂತಾನ್​ ಭಾರತದ ಸ್ನೇಹ ಹಸ್ತವನ್ನ ಕೂಡ ಚಾಚಿತ್ತು. ಇನ್ನು ಭಾರತಕ್ಕೂ ಕೂಡ ತನ್ನ ಅಕ್ಕಪಕ್ಕದಲ್ಲಿರುವ ಸಣ್ಣಪುಟ್ಟ ರಾಷ್ಟ್ರಗಳೊಂದಿಗಿನ ಸಂಬಂಧ ಬಲ ಪಡಿಸೋದು ಮುಖ್ಯವಾಗಿತ್ತು, ಹಾಗಾಗಿ ಭೂತಾನ್​ ಸ್ನೇಹಕ್ಕೆ ಭಾರತ ಹಲವು ದಶಕಗಳ ಹಿಂದೆ ಅಸ್ತು ಅಂತ ಹೇಳಿದೆ. ಹೀಗಾಗಿ ಈ ಎರಡು ರಾಷ್ಟ್ರದ ಸಂಬಂಧಗಳು ಈ ಹಿಂದಿನಿಂದ ಸಾಕಷ್ಟು ಬಲಿಷ್ಟವಾಗಿ ರೂಪುಗೊಂಡು ಬಂದಿದೆ.

ಆದ್ರೆ ಕೆಲ ವರ್ಷಗಳ ಹಿಂದೆ ಚೀನಾ ಭೂತಾನ್​ನೊಂದಿಗೆ ಸಂಬಂಧ ಸುಧಾರಣೆಯ ಮಾತನಾಡಿತ್ತು. ಆದ್ರೆ ಜೊತೆಗೆ ಭಾರತ ಅಂತರಿಕ ಭದ್ರತೆಗೆ ಕೂಡ ಇದು ಅಪಾಯಕಾರಿ ಬೆಳವಣಿಗೆಯಾಗಿ ಕಂಡು ಬಂದಿತ್ತು.ಇದೇ ವೇಳೆಯಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿ, ತಮ್ಮ ಮೊದಲ ವಿದೇಶ ಪ್ರವಾಸವನ್ನ ಭುತಾನ್​ಗೆ ಕೈಗೊಂಡರು, ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದ ಪ್ರಧಾನಿ ಮೋದಿ. ಭೂತಾನ್​ನಲ್ಲಿ ಹೂಡಿಕೆ, ಔಷಧಿ ಸಾಮಾಗ್ರಿ, ಆಹಾರ ಧಾನ್ಯಗಳ ರಪ್ತಿನ ಕುರಿತು ಚರ್ಚೆಯನ್ನ ನಡೆಸಿದ್ದರು. ಇದೇ ವೇಳೆ ಭೂತಾನ್ ಹಾಗು ಭಾರತದ ನಡುವೆ ಮತ್ತೆ ಸಂಬಂಧ ಸುಧಾರಿಸುತ್ತ ಹೆಜ್ಜೆ ಹಾಕಿದ್ದರು. ಇದಾದ ಬಳಿಕ ಭಾರತ ಹಾಗು ಭೂತಾನ್​ ಮತ್ತೆ ಮಿತ್ರ ರಾಷ್ಟ್ರಗಳಾಗಿದ್ದವು.

ಹೀಗೆ ಕಳೆದ ಹಲವು ವರ್ಷಗಳಿಂದ ಭೂತಾನ್ ಹಾಗು ಭಾರತದ ನಡುವೆ ಉತ್ತುಮವಾದ ಬಾಂಧವ್ಯ ಏರ್ಪಟ್ಟಿದೆ. ಭಾರತ ಭೂತಾನ್​ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಆಡಳಿತವಿದೆ. ಇದಲ್ಲದೇ ದ್ವಿಪಕ್ಷೀಯ ಸಂಬಂಧಗಳಲ್ಲಿ ಭಾರತವು ಭೂತಾನ್​ನ ಅತಿದೊಡ್ಡ ವ್ಯಾಪಾರ ಮತ್ತು ಅಭಿವೃದ್ಧಿ ಪಾಲುದಾರನಾಗಿ ಮುಂದುವರೆದಿದೆ. ಇನ್ನು ಇತ್ತೀಚೆಗೆ ವಿಶ್ವದಾದ್ಯಂತ ಕೊವಿಡ್​ ಪ್ರಕರಣಗಳು ಹೆಚ್ಚಾದಾಗ ಕೂಡ ಭಾರತ ಭೂತಾನ್​ನ ನೆರವಿಗೆ ನಿಂತಿತ್ತು, ನರೇಂದ್ರ ಮೋದಿ ಸರ್ಕಾರ ಕೋವಿಡ್ -19 ಲಸಿಕೆಗಳ ಉಡುಗೊರೆಯನ್ನು ಸ್ವೀಕರಿಸಿದ ಮೊದಲ ದೇಶ ಕೂಡ ಇದೇ ಭೂತಾನ್​. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ, ಭೂತಾನ್​ ಭಾರತದಿಂದ 1.5 ಲಕ್ಷ ಡೋಸ್​ಗಳ ಕೋವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಸ್ವೀಕರಿಸಿತ್ತು.

ಇದಾದ ಬಳಿಕ ಭೂತಾನ್ ಕೇಂದ್ರ ಸರ್ಕಾರದಿಂದ ಹೆಚ್ಚುವರಿ 4,00,000 ಕೋವಿಡ್-19 ಲಸಿಕೆಯನ್ನ ಪಡೆದಿತ್ತು. ಹೀಗಾಗಿ ಕೊರೋನಾ ಸೋಂಕಿನ ವಿರುದ್ಧ ರಾಷ್ಟ್ರವ್ಯಾಪಿ ಲಸಿಕಾ ಪ್ರಕ್ರಿಯೆಯನ್ನು ಭೂತಾನ್​ ಸಕ್ರಿಯೆಗೊಳಿಸಿ ಕೊವಿಡ್​ ಹರಡೋದನ್ನ ತಡೆಯೋದರಲ್ಲಿ ಯಶಸ್ವಿಯಾಗಿತ್ತು. ಈ ಬಗ್ಗೆ ಸ್ಮರಿಸಿರುವ ಭೂತಾನ್ನ ಪ್ರಧಾನಿ ಲೋಟೆ ತ್ಶೆರಿಂಗ್ ಕೃತಜ್ಞತೆಯನ್ನ ಕೂಡ ಸಲ್ಲಿಸಿದ್ದರು, ಇನ್ನು ಕಳೆದ ವರ್ಷ ಕೂಡ ಪ್ರಧಾನಿ ಮೋದಿ ಭೂತಾನ್​ಗೆ ತೆರಳಿದ್ದಾಗ ಜಲವಿದ್ಯುತ್ ಕ್ಷೇತ್ರದ ಪಾಲುದಾರಿಕೆಯನ್ನು ವೈವಿಧ್ಯಗೊಳಿಸೋದಕ್ಕೆ ಹಾಗು ಬಾಹ್ಯಾಕಾಶ, ಶಿಕ್ಷಣದಲ್ಲಿ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಕುರಿತು ಕೂಡ ಮಾತನಾಡಿದ್ರು.

ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡಿದ್ದ ಭೂತಾನ ತನ್ನ ರಾಷ್ಟ್ರೀಯ ದಿನದ ಅಂಗವಾಗಿ, ಭೂತಾನ್​ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಾಡಾಗ್ ಪೆಲ್ ಗಿ ಖೋರ್ಲೋ ನೀಡಿ ಗೌರವಿಸಿದೆ. ಈ ವೇಳೆ ಭೂತಾನ್​ನ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರಧಾನಿ ಮೋದಿ ಕೊವಿಡ್​ ಸಂದರ್ಭದಲ್ಲಿ ನೀಡಿದ್ದ ನೆರವನ್ನ ಸ್ಮರಿಸಿದ್ದ ಬಹಳ ಗಮನಾರ್ಹವಾಗಿತ್ತು. ಇನ್ನು ಇದೇ ವೇಳೆ ಉಪಸ್ಥಿತರಿದ್ದ ಭೂತಾನ್ನ ಅರಸ ಜಿಗ್ಮೆ ಖೇಸರ್ ನಾಮ್​ಗೈಲ್ ವಾಂಗ್​ ಚುಕ್ ಕೂಡ ಪ್ರಧಾನಿ ಮೋದಿ ನೆರವಿಗೆ ಧನ್ಯವಾದವನ್ನಕೂಡ ತಿಳಿಸಿದ್ದಾರೆ.​

ಸದ್ಯಕ್ಕೆ ಭೂತಾನ್​ ಹಾಗು ಭಾರತದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಈ ಹಿನ್ನೆಲೆಯಲ್ಲಿ ಭೂತಾನ್​ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನ ಮೋದಿಗೆ ನೀಡಿ ಗೌರವಿಸಿರೋದು ಜಾಗತಿಕವಾಗಿ ಗಮನ ಸೆಳೆದಿದೆ. ಮತ್ತೊಂದು ಕಡೆ ಭೂತಾನ್​ನ ಈ ನಡೆ ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಭಾರತ ಹಾಗು ಭೂತಾನ್​ನ ಈ ಸಂಬಂಧ ಚೀನಾದ ಬುಡಕ್ಕೆ ಬೆಂಕಿ ಬಿದ್ದಿರೋದಂತು ಸುಳ್ಳಲ್ಲ. ಅದೇನೆ ಇರಲಿ ಭೂತಾನ್​ ರಾಜಕೀಯದಿಂದ ಹೊರಗೆ ನಿಂತು ಭಾರತದ ಪ್ರಧಾನಿಗೆ ಗೌರವವನ್ನ ಸೂಚಿಸಿದೆ. ಆ ಮೂಲಕ ಭಾರತ ಎಂತಹ ನಂಬಿಕಸ್ತ ರಾಷ್ಟ್ರ ಅನ್ನೋದನ್ನ ಈ ಮೂಲಕ ಜಗತ್ತಿಗೆ ಸಾರಿ ಹೇಳಿದೆ.

RELATED ARTICLES

Related Articles

TRENDING ARTICLES