Wednesday, January 22, 2025

ಎಂ ಇ‌ ಎಸ್ ಪುಂಡರ ವಿರುದ್ಧ ಕಠಿಣ ಕ್ರಮ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟವನ್ನು ನಾನು ಖಂಡಿಸುತ್ತೇನೆ.ಈಗಾಗಲೇ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇ ಎಂದು ಮುಖ್ಯಮಂತ್ರಿಗಳ ಬಸವರಾಜ್ ಬೊಮ್ಮಾಯಿ ಆವರು ಹೇಳಿದರು.

ನಗರದ ಸರ್ಕಾರದ ಆಸ್ತಿ ಹಾನಿ ಮಾಡಿದ್ದಾರೆ. ಹಾಗೂ ಪೊಲೀಸ್ ವಾಹನ ಜಖಂ ಮಾಡಿದವರನ್ನು ಬಂಧಿಸಲಾಗಿದೆ. ರಾಷ್ಟ್ರ ಭಕ್ತರ ಪ್ರತಿಮೆಗಳಿಗೆ ಅಪಮಾನ ಪ್ರವೃತ್ತಿ ಸಹಿಸುವುದಿಲ್ಲ. ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಅಪರಾಧ. ನಾಡಿನ ಹಿರಿಯ, ದೇಶಭಕ್ತರ ಗೌರ ಉಳಿಸುವ ಕೆಲಸ ನಾವು ಮಾಡಬೇಕು ಅವರಿಗೆ ಅಪಮಾನ ಮಾಡುವ ಮೂಲಕ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವುದು ಸರಿಯಲ್ಲ ಎಂದರು.

ಘಟನೆಯ ಹಿಂದೆ ಅಧಿವೇಶನವನ್ನು ಅಡ್ಡಿಪಡಿಸುವುದು ಸರಿಯಿಲ್ಲ. ಇದರ ಹಿಂದೆ ಬೇರೆಯೇ ಉದ್ದೇಶವಿದೆ. ಆದನ್ನು ನಾವು ತನಿಖೆ ಮಾಡಲು ಹೀಗಾಗಲೇ ಹೇಳಿದ್ದೇವೆ.ಆಲ್ಲದೇ ನಾವು ಇಂತಹ ಪುಂಡರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮತ್ತು ಎಂ ಇ‌ ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆಂದು ಸಿಎಂ ಬೊಮ್ಮಾಯಿಯವರು ಪ್ರತಿಕ್ರಿಯೆ ನೀಡಿದರು.

RELATED ARTICLES

Related Articles

TRENDING ARTICLES