ಹಾಸನ : ಶಾಸಕ ಪ್ರೀತಂಗೌಡ ನಮ್ಮ ಮನೆ ಒಡೆದರು ಎಂಬ ಎ ಮಂಜು ಹೇಳಿಕೆಗೆ ಪರೋಕ್ಷವಾಗಿ ಬಿಜೆಪಿ ಶಾಸಕ ಪ್ರೀತಂಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.
ಎ ಮಂಜಣ್ಣ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಅವರು ಪಕ್ಷದ ಕಛೇರಿಗೆ ಬಂದಾಗ ಚರ್ಚೆ ಮಾಡ್ತೀನಿ ಏನಾದರೂ ಕಮ್ಯುನಿಕೇಷನ್ ಗ್ಯಾಪ್ ಆಗಿದ್ರೆ ಸರಿ ಪಡಿಸೋ ಕೆಲಸ ಮಾಡ್ತೀನಿ. ತಮ್ಮ ಮಗನಿಗೆ ಟಿಕೇಟ್ ಕೊಟ್ಟರೆ ಐದು ಕೋಟಿ ಕೊಡೊದಾಗಿ ಪ್ರೀತಂಗೌಡ ಹೇಳಿದ್ದರು ಎಂಬ ಮಾತಿಗೂ ಪ್ರತಿಕ್ರಿಯೆ ನೀಡಿದ ಅವರು ಯಾವ ಸಮಯದಲ್ಲಿ ಯಾರು ಹೇಳಿದ್ರು ಏನು ಹೇಳಿದ್ರು ನನಗೆ ಗೊತ್ತಿಲ್ಲ. ನಾನು ಪಕ್ಷದ ಶಾಸಕ, ಅಭ್ಯರ್ಥಿ ಯಾರು ಆಗಬೇಕು ಎಂದಾಗ ನಾನು ಹೇಳಿರಬಹುದು ಹಾಗೂ ಬೇರೆಯವರು ಕೂಡ ಹೇಳಿರಬಹುದು. ಅದನ್ನು ಮಾಧ್ಯಮದ ಮುಂದೆ ಮಾತನಾಡುವಷ್ಟು ಅಸಂಬದ್ಧತೆ, ಇಮ್ಮೆಚ್ಯುರಿಟಿ ಪ್ರೀತಂಗೌಡಗೆ ಇಲ್ಲ ಎನ್ನೋದು ರಾಜ್ಯದ ಜನತೆಗೆ ಗೊತ್ತು. ಬಿಜೆಪಿ ರಾಷ್ಟ್ರೀಯ ಪಕ್ಷವು ಅಭ್ಯರ್ಥಿಯನ್ನು ತೀರ್ಮಾನ ಮಾಡೋದು, ನಾನು ಆಶ್ವಾಸನೆ ಕೊಡುವಷ್ಟು ದೊಡ್ಡವನಾಗಿಲ್ಲ.
ಅವರು ಹಿರಿಯರಿದ್ದಾರೆ ಅವರ ವಯಸ್ಸಿಗೆ ಗೌರವ ಕೊಡ್ತೀನಿ ಎನ್ನುತ್ತಲೇ ಎ ಮಂಜು ವಿರುದ್ದ ಗುಡುಗಿದ್ದಾರೆ. ಯಾರು ಕ್ರೆಡಿಬಲಿಟಿ ಇರೋ ಲೀಡರ್, ಯಾರು ಮಾತಿಗೆ ಬದ್ದವಾಗಿ ಇರ್ತಾರೆ ಯಾರು ಯಾವಾವ ಸಮಯದಲ್ಲಿ ಯಾವ್ಯಾವ ಪಾರ್ಟಿಗೆ ಲಾಂಗ್ ಜಂಪ್ ಆಗುತ್ತಾರೆ ಎನ್ನುವುದು ಗೊತ್ತಿದೆ. ನಾನು ಬದುಕಿರೋವರೆಗೆ ಬಿಜೆಪಿ ಪಕ್ಷದಲ್ಲೇ ಇರುತ್ತೇನೆ.
ಅವರು ಬರೀ ಬಾಯಲ್ಲಿ ಮಾತಾಡ್ತಾರೆ, ಆದರೆ ನಾಳೆ ಯಾವ ಪಕ್ಷ ಅಂದ್ರೆ ಬಾಯೇ ಹೊರಳಲ್ಲ. ಅಂತಹವರು ನನ್ನ ಬಗ್ಗೆ ಮಾತಾಡೋ ಯಾವ ನೈತಿಕೆ ಇದೆ. ಅವರ ಮನೆಯನ್ನು ಒಡೆಯುವಷ್ಟು ಕಟುಕ ನಾನಲ್ಲ. ಇಲ್ಲಿ ಬಿಜೆಪಿಯಿಂದ ಮಗ ಕ್ಯಾಂಡೇಟ್ ಆಗ್ತಾನೆ ಅಂತಾ ಚರ್ಚೆ ಮಾಡ್ತಾರೆ , ಆದರೆ ಅಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆಗೋಕೆ ಕೆಪಿಸಿಸಿಗೆ ಡಿಡಿ ಯಾರು ಕೊಟ್ಟಿದಾರೆ ಚೆಕ್ ಮಾಡಿಕೊಳ್ಳಿ.
ಇವರು ಓದಿರೋ ಸ್ಕೂಲಲ್ಲೇ ನಾನು ಟೀಚರ್ ಆಗಿ, ಪ್ರಿನ್ಸಿಪಲ್ ಆಗಿ ರಿಟೈರ್ ಆಗಿ ಈಗ ಮ್ಯಾನೇಜ್ಮೆಂಟ್ ಕಮಿಟಿ ಅಧ್ಯಕ್ಷ ಆಗಿದ್ದೀನಿ , ಆದರೆ ಅವರು ಮಾತ್ರ ಇನ್ನೂ ಆ ಸ್ಕೂಲಲ್ಲೇ ಓದುತ್ತಿದ್ದಾರೆ ಅನ್ನಿಸುತ್ತಿದೆ. ಅಲ್ಲದೇ ಅವರು ಜಗತ್ತಿಗೆ ನಾನೊಬ್ಬನೇ ಬುಧ್ದಿವಂತ ಅಂದುಕೊಂಡಿದ್ದಾರೆ. ಆದರೆ ಅವರಿಗೆ ಆ ಕಾಲ ಮುಗಿದು ಹೋಗಿದೆ, ಅಂತಹವರು ಸುಮಾರು ಜನ ಬಂದಿದ್ದಾರೆ. ಹಾಗಾಗಿ ಅವರು ಹೆಚ್ಚು ಚಾಣಾಕ್ಷತನ ತೋರಿಸೊದು ಬೇಡಾ ಎಂದು ಶಾಸಕ ಪ್ರೀತಂಗೌಡ ಎಚ್ಚರಿಕೆ ನೀಡಿದರು.