Monday, December 23, 2024

‘ಇಂಡಿಗೋ’ ವಿರುದ್ಧ ರೋಸಿದ ರೋಜಾ

ಬೆಂಗಳೂರು : ಬಹು ಭಾಷಾ ನಟಿ ಹಾಗೂ ವೈ ಎಸ್ ಆರ್ ಕಾಂಗ್ರೆಸ್ ಶಾಸಕಿ ರೋಜಾ ಇಂಡಿಗೋ ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶಗೊಂಡಿದ್ದಾರೆ.

ರಾಜಮಂಡ್ರಿಯಿಂದ ತಿರುಪತಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವೂ ತಾಂತ್ರಿಕ ದೋಷದಿಂದ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗಿತ್ತು. ಲ್ಯಾಂಡಿಂಗ್ ವೇಳೆ 4 ರಿಂದ 5 ಗಂಟೆ ಕೆಳಗೆ ಇಳಿಯಲು ಬಿಡಲಿಲ್ಲ. ಅಲ್ಲದೇ, ಈ ವೇಳೆ ಪ್ರಯಾಣಿಕರು ಕೆಳಗೆ ಇಳಿಯಬೇಕಿದ್ದರೆ 5 ಸಾವಿರ ರೂಪಾಯಿ ನೀಡುವಂತೆ ವಿಮಾನಯಾನ ಸಂಸ್ಥೆ ಕೇಳಿದೆ ಎಂದು ನಟಿ ರೋಜಾ ಆರೋಪಿಸಿದ್ದಾರೆ. ಅಲ್ಲದೇ, ವಿಮಾನಯಾನ ಸಂಸ್ಥೆ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES