Sunday, January 5, 2025

ಡಿ.19ರಂದು ಮಹಿಳೆಯರೊಂದಿಗೆ ಸಂವಾದ : ಪ್ರಿಯಾಂಕ ಗಾಂಧಿ

2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಅಖಾಡಕ್ಕಿಳಿದಿದೆ. ಒಂದೆಡೆ ರ್‍ಯಾಲಿ, ಸಾರ್ವಜನಿಕ ಸಭೆಗಳ ಮೂಲಕ ವಾತಾವರಣ ಸೃಷ್ಟಿಸುವ ಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರಣಾಳಿಕೆಯ ಜನಪರ ಭರವಸೆಗಳ ಮೂಲಕ ಜನಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿಸೆಂಬರ್ 19 ರಂದು ರಾಯ್ ಬರೇಲಿಯ ಟೌನ್ ಹಾಲ್‌ನಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಹಣದುಬ್ಬರ ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್ ಆರಂಭಿಸಿರುವ ‘ಜನ್ ಜಾಗರಣ ಅಭಿಯಾನ’ದ ಭಾಗವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಡಿಸೆಂಬರ್ 18 ರಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸಲಿದ್ದಾರೆ ಎಂದು ಪಕ್ಷದ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು 2004 ರಿಂದ 2019 ರವರೆಗೆ ಅಮೇಥಿಯಿಂದ ಲೋಕಸಭಾ ಸದಸ್ಯರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಸ್ಮೃತಿ ಇರಾನಿಯವರಿಂದ ಸೋಲು ಅನುಭವಿಸಬೇಕಾಯಿತು. ಹಣದುಬ್ಬರ ಮತ್ತು ಆರ್ಥಿಕತೆಯ ‘ದುರ್ ನಿರ್ವಹಣೆ’ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮತ್ತು ಸರ್ಕಾರವನ್ನು ಸುತ್ತುವರಿಯುವ ಉದ್ದೇಶದಿಂದ ಕಾಂಗ್ರೆಸ್ ಕಳೆದ ನವೆಂಬರ್ 14 ರಿಂದ ‘ಜನ ಜಾಗರಣ ಅಭಿಯಾನ’ ಆರಂಭಿಸಿದೆ.

ಈ ಸಂದರ್ಭದಲ್ಲಿ ವೇಣುಗೋಪಾಲ್ ಮಾತನಾಡಿ, ‘ಕಾಂಗ್ರೆಸ್‌ನ ಈ ಅಭಿಯಾನವನ್ನು ದೇಶದ ಸಾಮಾನ್ಯ ಜನರು ಬೆಂಬಲಿಸುತ್ತಿದ್ದಾರೆ ಮತ್ತು ನವೆಂಬರ್ 1 ರಿಂದ ನಡೆಯುತ್ತಿರುವ ಸದಸ್ಯತ್ವ ಅಭಿಯಾನಕ್ಕೆ ಸಹ ಸೇರುತ್ತಿದ್ದಾರೆ. ಡಿ.16 ರಂದು ಡೆಹ್ರಾಡೂನ್‌ನಲ್ಲಿ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

RELATED ARTICLES

Related Articles

TRENDING ARTICLES