ಬೆಂಗಳೂರು: ಪ್ರೆಸ್ಟೀಜ್ ಪ್ರೆಶರ್ ಕುಕರ್ ಗೊತ್ತಲ್ವ? ಇಡೀ ಭಾರತದಲ್ಲೇ ಪ್ರೆಸ್ಟೀಜ್ ಗ್ರೂಪ್ ಅಂದ್ರೆ ಸಖತ್ ಹೆಸರುವಾಸಿ. ಇದೀಗ ಇದೇ ಪ್ರೆಸ್ಟೀಜ್ ಗ್ರೂಪ್ನ ಒಡತಿಗೆ ಡ್ರಗ್ ಪೆಡ್ಲರ್ ಜೊತೆ ಲಿಂಕ್ ಇದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಅಷ್ಟಕ್ಕೂ ಆಫ್ರೀಕನ್ ಡ್ರಗ್ ಪೆಡ್ಲರ್ ಜೊತೆ ಸಾವಿರ ಕೋಟಿ ಒಡತಿಗೇನು ಕೆಲಸ? ‘ಪ್ರೆಸ್ಟೀಜ್’ ಬದಿಗೊತ್ತಿ ನೆಶೆ ಏರಿಸಲು ಹೋಗಿ ತಗಲಾಕಿಕೊಂಡ್ಲಾ ಪ್ರೆಸ್ಟೀಜ್ ಲೇಡಿ? ಪೊಲೀಸ್ರ ಕೈಗೆ ಸಾಕ್ಷಿ ಸಮೇತ ಸಿಕ್ಕಿಬಿದ್ಲಾ ‘ಪ್ರೆಸ್ಟೀಜಿ’ಯಸ್ ಲೇಡಿ ? ಸಾವಿರಾರು ಕೋಟಿ ಒಡತಿಗೆ ನೊಟೀಸ್ ಕೊಟ್ಟಿದ್ದಾರಾ ಖಾಕಿ ಎಂಬೆಲ್ಲ ಪ್ರಶ್ನೆಗಳು ಎಲ್ಲೆಲ್ಲೂ ಚರ್ಚೆಯಾಗುತ್ತಿವೆ.
ಅಂದ ಹಾಗೆ ಯಾರು ಈ ಸಾವಿರಾರು ಕೋಟಿಯೊಡತಿ ಅನ್ನೋದನ್ನ ನೋಡಿದ್ರೆ, ಡ್ರಗ್ ಲಿಂಕ್ ನಲ್ಲಿ ಸಿಕ್ಕಿಬಿದ್ದಿರೋದು ಈ ಲೇಡಿ ಬೇರೆ ಯಾರೂ ಅಲ್ಲ, ಪ್ರೆಸ್ಟೀಜ್ ಕಂಪನಿಯ ಓನರ್ ತಂಗಿ ಅಂಜುಂ ರಜಾಕ್ ಎಂಬುದು ತಿಳಿದುಬಂದಿದೆ.
ಸಾವಿರಾರು ಕೋಟಿ ಆಸ್ತಿ ಹೊಂದಿರುವ ರಜಾಕ್ ಕುಟುಂಬಕ್ಕೆ ಸೇರಿದ ಅಂಜುಂಮಾದಕ ಲೋಕದಲ್ಲಿ ಮುಳುಗೆದ್ದಳಾ ಎಂಬ ಪ್ರಶ್ನೆ ಇದೀಗ ಪೊಲೀಸರ ತಲೆತಿನ್ನುತ್ತಿದೆ. ಪ್ರೆಸ್ಟೀಜ್ ಕಂಪನಿ ರಿಯಲ್ ಎಸ್ಟೇಟ್ನಲ್ಲಿ ಉತ್ತುಂಗದಲ್ಲಿದೆ. ಇಂಥ ಕಂಪನಿಯ ಒಡತಿಗೆ ಈಗ ಗೋವಿಂದಪುರ ಪೊಲೀಸರು ಷಾಕ್ ನೀಡಿದ್ದಾರೆ. ಅಂಜುಂ ರಜಾಕ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಅಂಜುಂ ರಜಾಕ್ ಡ್ರಗ್ ಪೆಡ್ಲರ್ ತೋಮಸ್ ಕಾಲ್ ಜೊತೆ ನಿರಂತರ ಸಂಪರ್ಕದಲ್ಲಿದ್ದಳು ಎಂಬ ವಿಷಯ ಇದೀಗ ಪೊಲೀಸರ ಬಳಿಯಿದೆ. ವಾಟ್ಸಪ್ ನಲ್ಲಿ ಕಾಂಟಾಕ್ಟ್ ಮಾಡಿ ಡ್ರಗ್ಸ್ ತರ್ಸಿಕೊಂಡ ಅಂಜುಂ ಎಂಬುದಕ್ಕೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ. ನೊಟೀಸ್ ಗೆ ಉತ್ತರಿಸದಿದ್ದರೆ ಪ್ರೆಸ್ಟೀಜ್ ಒಡತಿ ಅಂಜು ರಜಾಕ್ಳನ್ನು ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಓಂಪ್ರಕಾಶ್ ನಾಯಕ್, ಪವರ್ ಟಿವಿ.