Monday, December 23, 2024

ಬಿಗ್ ಬಾಸ್ ಸೀಸನ್ -9 ರ ಸುಳಿವು..!

ಬೆಂಗಳೂರು : ಬಿಗ್ ಬಾಸ್ ಸೀಸನ್ ಒಂಭತ್ತರ ಆರಂಭದ ಬಗ್ಗೆ ಅಭಿನವ ಚಕ್ರವತ್ರಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಕೊರೋನಾ ಮೂರನೇ ಅಲೆ ಭೀತಿ ಎದುರಾಗಿದ್ದು, ಎಲ್ಲವೂ ಅಂದುಕೊಂಡತೆ ಯಾವುದೇ ಅಡೆತಡೆ ಇಲ್ಲದೇ ನಡೆದರೆ ಬಹುಶಃ 2021 ರ ಜನವರಿಯಿಂದ ಆರಂಭವಾಗಬಹುದು ಎಂದು ಹೇಳಿದ್ದಾರೆ.

ಈಗಾಗಲೇ ಕಿರುತೆರೆ ಲೋಕದ ಪ್ರಮುಖ ಸೆಲಿಬ್ರಿಟಿಗಳನ್ನು ಕಾರ್ಯಕ್ರಮ ಆಯೋಜಕರು ಸಂಪರ್ಕಿಸಿದ್ದಾರೆ ಎಂಬ ವದಂತಿಗೆ ಉತ್ತರಿಸಿದ ಅವರು, ಕಾರ್ಯಕ್ರಮಕ್ಕೂ ಮುನ್ನ ಈ ರೀತಿಯ ಸುದ್ದಿ ಹರಿದಾಡುವುದು ಸಾಮಾನ್ಯವಾಗಿದ್ದು, ಈ ಬಾರಿಯ ಬಿಗ್​ಬಾಸ್ ಕಾರ್ಯಕ್ರಮದಲ್ಲೇ ಸ್ಪರ್ಧಿಗಳ ಮಾಹಿತಿ ಸಿಗಲಿದೆ ಎಂದು ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES