Monday, December 23, 2024

ಜೆಡಿಎಸ್​ ಕ್ರಾಂಗೆಸ್​ ಪಕ್ಷದ ಅನುಕೂಲ ಅನಾನುಕೂಲ

ಜೆಡಿಎಸ್​ ಪ್ಲಸ್ ಪಾಯಿಂಟ್

1. JDS ಭದ್ರಕೋಟೆಯನ್ನ ಮತ್ತಷ್ಟು ಭದ್ರ ಮಾಡಿಕೊಳ್ಳಲು ಪಟ್ಟ ಶ್ರಮ.

2. ವರಿಷ್ಟರು, ನಾಯಕರು, ಶಾಸಕರು, ಮುಖಂಡರು, ಕಾರ್ಯಕರ್ತರ ಸಂಘಟಿತ ಹೋರಾಟ.

3. ಲೋಕಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳುವ ಶಪಥ.

4. ನಿಖಿಲ್ ನೇತೃತ್ವದ ಸಾಮೂಹಿಕ ನಾಯಕತ್ವಕ್ಕೆ ಸಂದ ಜಯ.

5. ಮಂಡ್ಯ ಮತ್ತೊಮ್ಮೆ JDS ಭದ್ರಕೋಟೆ ಅನ್ನೋದು ಸಾಬೀತು.

JDSನ ಮೈನಸ್ ಪಾಯಿಂಟ್

1. ಲೋಕಸಭೆ ಸೋಲಿನ ಬಳಿಕ JDS ಭದ್ರಕೋಟೆಯನ್ನ ನಿರ್ಲಕ್ಷ್ಯ ಮಾಡಿದ ವರಿಷ್ಟರು.

2. ಆರಂಭದಲ್ಲಿದ್ದ ಸಂಘಟಿತ ಹೋರಾಟ ಚುನಾವಣೆ ಸಮಯದಲ್ಲಿ ಭಿನ್ನಮತವಾಗಿ ಮಾರ್ಪಾಡು.

3. ಪ್ರಧಾನಿ ಮೋದಿ ಅವರ ಬಳಿ ಮಂಡ್ಯ ಜಿಲ್ಲೆಗೆ ಕೇಳುವಂತದ್ದು ಏನು ಇಲ್ಲ ಎಂಬ ದೇವೇಗೌಡರ ಹೇಳಿಕೆ.

4. ಲೋಕಸಭೆ ಚುನಾವಣೆ ಸೋಲಿನ ನಂತರವೂ ನಿಖಿಲ್ ಗೆ ಜಿಲ್ಲಾ ನಾಯಕತ್ವದ ಹೊಣೆ ಕೊಟ್ಟಿದ್ದು.

5. ಜಿಲ್ಲೆಯ ಶಾಸಕರನ್ನ ನಿರ್ಲಕ್ಷ್ಯ ಮಾಡಿ JDS ಅಭ್ಯರ್ಥಿ ನೇರವಾಗಿ ತಮ್ಮ ಕುಟುಂಬ ಸದಸ್ಯರನ್ನ ಕಟ್ಟಿಕೊಂಡು ಚುನಾವಣೆ ಮಾಡಲು ಹೊರಟಿದ್ದು.

ಕಾಂಗ್ರೆಸ್​ನ ಪ್ಲಸ್ ಪಾಯಿಂಟ್

1. ಜೆಡಿಎಸ್ ಭದ್ರಕೋಟೆ ಭೇದಿಸುವಲ್ಲಿ ಕೈ ನಾಯಕರ ಸಂಘಟಿತ ಹೋರಾಟ.

2. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳ ಸೋಲಿನ ಸೇಡು ತೀರಿಸಿಕೊಳ್ಳುವ ತವಕ.

3. ಜೆಡಿಎಸ್ ಶಾಸಕರು, ಮುಖಂಡರು, ನಾಯಕರ ಒಗ್ಗಟ್ಟು ಮುರಿಯುವಲ್ಲಿ ಯಶಸ್ವಿ.

4. ಬಿಜೆಪಿ ಮತಗಳನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲ.

5. ಬಿಜೆಪಿ-ಜೆಡಿಎಸ್ ಮೈತ್ರಿಯನ್ನ ತಡೆದು ಜೆಡಿಎಸ್ ಗೆ ಹಿನ್ನಡೆ ಉಂಟು ಮಾಡುವ ತಂತ್ರಗಾರಿಕೆಯಲ್ಲಿ ಮುನ್ನಡೆ.

ಕಾಂಗ್ರೆಸ್ ನ ಮೈನಸ್ ಪಾಯಿಂಟ್

1. ಜೆಡಿಎಸ್​ನ ಪಕ್ಷ ನಿಷ್ಟೆ ಎದುರು ಮಂಡಿಯೂರಿದ ಕಾಂಗ್ರೆಸ್.

2. ಚುನಾವಣೆಯಲ್ಲಿ ವೀರೋಚಿತ ಹೋರಾಟ ನಡೆಸಿದರೂ, ಜೆಡಿಎಸ್ ಭದ್ರಕೋಟೆ ಭೇದಿಸುವಲ್ಲಿ ವಿಫಲ.

3. ಜೆಡಿಎಸ್ ನ ಹೆಚ್ಚುವರಿ, ಬಿಜೆಪಿ ಹಾಗೂ ಇತರೆ ಮತಗಳನ್ನು ಸೆಳೆಯುವಲ್ಲಿ ಹಿನ್ನಡೆ.

4. ಜೆಡಿಎಸ್ ಪಕ್ಷದ ಒಗ್ಗಟ್ಟು ಮುರಿದು ಕಾಂಗ್ರೆಸ್ ಗೆ ಹೊಸ ಚೈತನ್ಯ ತಂದುಕೊಡುವ ನಾಯಕರ ಪ್ರಯತ್ನ ಫಲಿಸಲಿಲ್ಲ.

5. ಕಾಂಗ್ರೆಸ್ ನ ಅಬ್ಬರದ ಪ್ರಚಾರದ ನಡುವೆ ಗುಪ್ತಗಾಮಿನಿಯಂತೆ ಜೆಡಿಎಸ್ ಗೆ ಹರಿದ ಮತಗಳು.

RELATED ARTICLES

Related Articles

TRENDING ARTICLES