Wednesday, January 22, 2025

ಮೆದುಳತ್ವ ಸಂಸ್ಥೆಯಿಂದ “ಮೆದುಳು ಲೋಕ ಪ್ರತಿಮೆ” ಅನಾವರಣ

ಬೆಂಗಳೂರು: ಮಿದುಳತ್ವ ಸಂಸ್ಥೆಯಿಂದ ಭಾನುವಾರ ಮೆದುಳು ಲೋಕ ಪ್ರತಿಮೆಯ ಅನಾವರಣ ಕಾರ್ಯಕ್ರಮ ಎಂಬ ವಿಭಿನ್ನ ಕಾರ್ಯಕ್ರಮ ಬೆಂಗಳೂರಿನ ಗಿರಿನಗರದಲ್ಲಿ ನಡೆಯಿತು. ಪ್ರೊ.ಜಿ ರಾಮಕೃಷ್ಣ ಮೆದುಳಿನ  ಪ್ರತಿಮೆಯ ಅನಾವರಣ ಮಾಡಿದರು.  ಮೆದುಳಿನ  ಪ್ರತಿಮೆಯು ತಮ್ಮಲ್ಲಿರುವ ಮೆದುಳಿನ ವಿಸ್ಮಯವನ್ನು ಅರಿಯಲು ಸಾಧ್ಯವಾಗುತ್ತದೆ. ನಮ್ಮ ಮನಸ್ಸಿನ ಬಗ್ಗೆ ವೈಜ್ಞಾನಿಕವಾಗಿ  ಮೆದುಳಿನ ಬಗ್ಗೆ ಅದರಲ್ಲಿ ನರಕೋಶಗಳ ಬಗ್ಗೆ ಅರಿಯಲು ಸಾಧ್ಯವಾಗಿದೆ . ಆ ಜ್ಞಾನ ಈ ಸಂಸ್ಥೆಯಿಂದ ಜನರಿಗೆ    ತಿಳಿಸಲು ಸಾಧ್ಯವಾಗಬೇಕು ಆಗ ಜನರಲ್ಲಿ ವೈಜ್ಞಾನಿಕ  ಚಿಂತನೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಮಾಜಿ ಸಚಿವರು.ಬಿ.ಟಿ.ಲಲಿತ ನಾಯಕ್ ಜಗತ್ತಿನ ಸೃಷ್ಟಿಗೆ  ಮೂಲ ಮತ್ತು ಜಗತ್ತನ್ನು  ನಡೆಸುವವನು  ಎಲ್ಲದಕ್ಕೂ ಅವನೇ ಕಾರಣ.  ಅವನಿಲ್ಲದೆ ಏನೂ ನಡೆಯುವುದಿಲ್ಲ ಎಂಬ ಭ್ರಮೆಯಲ್ಲಿದ್ದೇವೆ . ಮಿದುಳಿನ ವೈಜ್ಞಾನಿಕ ಅರಿವು ಆಪ್ತವಾಗಿ ಮುಖಮುಖಿಯಾಗಿಸುತ್ತದೆ, ದೇವರ ಅಸ್ತಿತ್ವ ನಿರಾಕರಿಸಲು ಕಾರಣವಾಗಿದೆ.  ಈ ನಿರಾಕರಣೆಯಿಂದ ಮೌಡ್ಯ ಮೋಸ ವಂಚನೆಯಿಂದ ಪಾರಾಗಿ ಎಲ್ಲರ ಮೂಲಸೌಲಭ್ಯ ದೊರೆಯಬೇಕು..ಸಮಸ್ಯೆಗಳು   ನಿವಾರಣೆಯಾಗಬೇಕು.    ಮಿದುಳಿನ ವೈಜ್ಞಾನಿಕ ಅರಿವು ಪೂರ್ಣ ಬಳಕೆಯಿಂದ ನಾವೇನಾದರೂ ಸಾಧನೆ ಮಾಡಲು ಸಾಧ್ಯ ಎಂದರು.

ಡಾ ಸಿ ಆರ್ ಚಂದ್ರಶೇಖರ್ ಮಾತಾಡಿ ನಮ್ಮ ಮೆದುಳು ನಿಸರ್ಗ ನಮಗೆ ನೀಡಿರುವ ಅತ್ಯಮೂಲ್ಯವಾದ ಅಂಗ.  ಈ ಮಿದುಳಿನಲ್ಲಿ ಕೋಟ್ಯಾಂತರ ಜೀವಕೋಶಗಳಿವೆ. ನಾವು ಮಿದುಳಿನ ಸಾಮರ್ಥ್ಯದಲ್ಲಿ ಕೇವಲ ಶೇ10% ಮಾತ್ರ ಬಳಸಿಕೊಂಡಿದ್ದೇವೆ. ಮಿದುಳಿನ ಜೀವಕೋಶ ಸತ್ತರೆ ಮುಗಿಯಿತು. ಆತ್ಮಇದೆ, ಪುನರ್ಜನ್ಮ ಇದೆ,  ದೇವರು  ದೆವ್ವ ಮೈಮೇಲೆ ಬರುತ್ತದೆ  ಎನ್ನುವುದೆಲ್ಲ ಸುಳ್ಳು, ಶೋಷಣೆ ಒಳಗಾಗಬಾರದೆಂದು ತಿಳಿಸಿದರು.

ಪ್ರೊ. ಬೈರಮಂಗಲ    ರಾಮೇಗೌಡ ಮಾತನಾಡುತ್ತ ವೈಜ್ಞಾನಿಕ ಮನೋಭಾವ ಬೆಳೆಯಲು ಈ ಸಂಸ್ಥೆ ಸಹಕಾರಿಯಾಗುತ್ತದೆ ಎಂದರು. ಡಾ ಹನುಮಂತಪ್ಪನವರು ರಚಿಸಿರುವ ಕೃತಿಯಲ್ಲಿ ಕೂಡ ಮಿದುಳಿನ ಬಗ್ಗೆ ಸಾಕಷ್ಟ ಮಾಹಿತಿ ಇದೆ . ಇವೆಲ್ಲವು ಜನಸಮಾನ್ಯರಿಗೆ ದೊರೆಯುವಂತಾಗಬೇಕು. ದೇವರ ಪೂಜೆ ಪುರಸ್ಕಾರ ದಿಂದಲೇ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಎಂಬ ಭ್ರಮೆಯಿಂದ ಹೊರಬೇಕೆಂದರು.

ಇನ್ನು ಪ್ರೊ.ಅಬ್ದುಲ್ ರೆಹಮಾನ್ ಪಾಷ ಮಾತನಾಡುತ್ತ ಜೀವನದಲ್ಲಿ ಹಲವಾರು ಸವಾಲುಗಳನ್ನು  ವಾಸ್ತವವಾಗಿ  ಪ್ರಾಮಾಣಿಕವಾಗಿ ವೈಜ್ಞಾನಿಕವಾಗಿ  ಚಿಂತಿಸಿದರೆ ಎಲ್ಲವನ್ನೂ ನಾವೆ ಪರಿಹರಿಸಿಕೊಳ್ಳಲು ಸಾಧ್ಯ ಎಂದರು.  ಡಾ ಹನುಮಂತಪ್ಪನವರು  ಜೀವನದ ಉದ್ಧಕ್ಕೂ ಅಳವಡಿಸಿಕೊಂಡು ಬಂದಂತಹ ಗ್ರಾಮೀಣ ಹಿನ್ನಲೆಯ ಜನರಷ್ಟೇ ಅಲ್ಲ, ನಗರ ಜನರು ಮೌಡ್ಯ ಮೋಸ ವಂಚನೆಗೆ ಬಲಿಯಾಗುತಿರುವುದನ್ನು  ಮನಗಂಡು ನಮ್ಮ ಮಿದುಳಿನ ಬಗ್ಗೆ ಅರಿವನ್ನು ಮೂಡಿಸಲು ಯತ್ನಿಸುತ್ತಿರುವುದು ಅಭಿನಂದನಿಯ ಎಂದರು.

ಮನುಷ್ಯನ ಮಿದುಳಿನ ಬಲಭಾಗದಲ್ಲಿ ಭಾವನೆಗಳಿದ್ದರೆ, ಎಡಭಾಗದಲ್ಲಿ ವಿವೇಚನಾಭಾಗವಿರುತ್ತದೆ. ನಮ್ಮ ಕೋಪ, ಸಂತೋಷ, ದ್ವೇಷ ಇವೆಲ್ಲವನ್ನೂ ಮಿದುಳಿನ ಬಲಭಾಗ ನಿಯಂತ್ರಿಸಿದರೆ, ವಿವೇಚನೆ, ನಿಯಂತ್ರಣ ಇವುಗಳ ಯೋಚನೆಯನ್ನು ಮಿದುಳಿನ ಎಡಭಾಗ ಮಾಡುತ್ತದೆ ಎಂದು ಹೇಳುತ್ತ ಅಲ್ಲಿ ಓಡಾಡಿಕೊಂಡಿದ್ದ ಒಂದೂವರೆ ವರ್ಷದ ನೀತುಳನ್ನು ತೋರಿಸಿ ನೋಡಿ ಆ ಮಗುವಿನಲ್ಲಿಯ ಮಿದುಳು ಇದೀಗ ಬೆಳವಣಿಗೆಯ ಹಂತದಲ್ಲಿದೆ. ಅದಕ್ಕೆ ಅದರ ತಾಯಿ ಮತ್ತು ಅಜ್ಜಿ ಮಾತ್ರ ಗೊತ್ತು. ಉಳಿದವರ ಬಗ್ಗೆ ಅವಳ ಮಿದುಳು ತಿಳಿದುಕೊಳ್ಳಲು ಇನ್ನೂ ಕೊಂಚ ಸಮಯ ಬೇಕು ಎಂದು ಚಟಾಕಿ ಹಾರಿಸಿದರು.

ಕಾರ್ಯಕ್ರಮದ ನಂತರ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟವನ್ನು ಬಂದ ಅತಿಥಿಗಳು ಹಾಗೂ ಶ್ರೋತ್ರುಗಳು ಸವಿದರು.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES