Monday, May 20, 2024

ವೋಲ್ವೊ ಬಸ್ ದರ ಕಡಿತ

ಬೆಂಗಳೂರು: ಕರ್ನಾಟಕದಲ್ಲಿ ಬಿಎಂಟಿಸಿಯ ಬಳಿ ಇರುವ ವೋಲ್ವೊ ಬಸ್​ಗಳಲ್ಲಿ ಅರ್ಧಕ್ಕರ್ಧ ಬಸ್​ಗಳು ಡಿಪೊದಲ್ಲೇ ನಿಂತಿವೆ. ಅವುಗಳನ್ನು ರೋಡಿಗಿಳಿಸಲು ಬಿಎಂಟಿಸಿ ಹೊಸದೊಂದು ಪ್ಲಾನ್ ಮಾಡಿದೆ. ಆ ಪ್ಲಾನ್ ಏನು ಎಂದರೆ ಪ್ರಯಾಣಿಕರನ್ನು ಸೆಳೆಯುವುದು. ಅದಕ್ಕಿರುವ ಸುಲಭ ಉಪಾಯವೆಂದರೆ ಈಗಿರುವ ಟಿಕೆಟ್ ದರ ಕಡಿಮೆ ಮಾಡುವುದು.

ಹೌದು, ಬಿಎಂಟಿಸಿಗೆ ಈಗ ದರ ಹೆಚ್ಚಾಗಿರುವ ಬಗ್ಗೆ, ಅದರಿಂದಲೇ ಜನರು ಬರದೆ ವೋಲ್ವೊ ಬಸ್​ಗಳು ಡಿಪೊದಲ್ಲಿ ಬಿದ್ದಿರುವ ಬಗ್ಗೆ ಜ್ಷಾನೋದಯವಾದಂತಿದೆ. ಆದ್ದರಿಂದ ಬಿಎಂಟಿಸಿ ಶೇಕಡ 15ರಿಂದ 20 ರಷ್ಟುದರ ಕಡಿಮೆ ಮಾಡಿ ವೋಲ್ವೊಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಿದೆ.

ಸದ್ಯ ಪರಿಷತ್ತಿನ ಚುನಾವಣೆ ನಡೆಯುತ್ತರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಚುನಾವಣೆ ಮುಗಿದ ನಂತರ ದರ ಕಡಿಮೆ ಮಾಡಿ ಪ್ರಯಾಣಿಕರಿಗೆ ಗಿಫ್ಟ್ ನೀಡಲು ಬಿಎಂಟಿಸಿ ತಯಾರಾಗಿದೆ. ಹೊಸವರ್ಷಕ್ಕೆ ಮುನ್ನವೇ ಈ ದರ ಕಡಿತದ ಗಿಫ್ಟ್​ನ್ನು ಪ್ರಯಾಣಿಕರಿಗೆ ಬಿಎಂಟಿಸಿ ನೀಡಲಿದೆ.

RELATED ARTICLES

Related Articles

TRENDING ARTICLES