Wednesday, January 22, 2025

ಕಾಮಾಕ್ಷಿಪಾಳ್ಯದಲ್ಲಿ ಪುಡಿರೌಡಿಗಳ ಅಟ್ಟಹಾಸ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಪುಡಿರೌಡಿಗಳ ಹಾವಳಿ  ಅತಿಯಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಈ ಪುಡಿರೌಡಿಗಳು ಎಣ್ಣೆ ಹೊಡೆದು ತಮ್ಮ ಅಟ್ಟಹಾಸವನ್ನು ಮೆರೆಯತೊಡಗುತ್ತಾರೆ. ಇವರ ಈ ಆಟಾಟೋಪಕ್ಕೆ ಕಾರಣ ಇರಲೇಬೇಕು ಅಂತೇನಿಲ್ಲ. ವಿಕೃತ ಮನಸ್ಥಿತಿಯ ಈ ರೌಡಿಗಳು ಅಮಲಿನಲ್ಲಿ ಪುಂಡಾಟ ನಡೆಸುವುದು ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾನೆ ವ್ಯಾಪ್ತಿಯಲ್ಲಿ ಈ ರೀತಿ ಪುಡಿರೌಡಿಗಳು ಹಾವಳಿ ನಡೆಸಿದ್ದಾರೆ. ಮನೆ ಮುಂದೆ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳನ್ನು ಜಖಂ ಮಾಡಿದ್ದಾರೆ. ಕಾರುಗಳ ಗಾಜು ಒಡೆದು ತಮ್ಮ ವಿಕೃತಿಯನ್ನು ಮೆರೆದಿದ್ದಾರೆ. ದೊಣ್ಣೆ ಮತ್ತು ಲಾಂಗ್​ನಿಂದ ಹೊಡೆದು ಕಾರುಗಳ ಮೇಲೆ ಅಟ್ಯಾಟಕ ಮಾಡಿದ್ದಾರೆ ಎನ್ನಲಾಗಿದೆ. ಹೀಗೆ ಆರು ವಾಹನಗಳನ್ನು ದುಷ್ಕರ್ಮಿಗಳು ಹಾಳುಗೆಡವಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ತನಿಖೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES