Sunday, January 19, 2025

ಯಾವ ಮೂಲೆಯಲ್ಲಿ ನಿಂತರೂ ಸಿದ್ದರಾಮಯ್ಯ ಗೆಲ್ತಾರೆ : ಹಿಟ್ನಾಳ

ಕೊಪ್ಪಳ : ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂದು ಕೊಪ್ಪಳದಲ್ಲಿ ‌ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ರಾಯಚೂರು – ಕೊಪ್ಪಳ ವಿಧಾನ ಪರಿಷತ್ ಚುನಾವಣೆ ಮತದಾನ ಮಾಡಿ ಮಾತನಾಡಿದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದು ಭರವಸೆ ಮಾತನಾಡಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆಗೆ ಚಿಮ್ಮನಕಟ್ಟಿ‌ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹಿಟ್ನಾಳ ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಸಿದ್ದರಾಮಯ್ಯ ಗೆಲ್ಲುತ್ತಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿದ ಆಡಳಿತವೇ ಇದಕ್ಕೆ ಕಾರಣ ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಅವರ ಕೆಲಸ ತಲುಪಿದೆ ಕಳೆದ 2018ರಲ್ಲಿ ಕೊಪ್ಪಳ, ಕುಷ್ಟಗಿಯಲ್ಲಿ ಸ್ಪರ್ಧೆ ಮಾಡುವಂತೆ ನಾನೇ ಕೇಳಿಕೊಂಡಿದ್ದೆ ಅದೇ ಸಮಯಕ್ಕೆ ಇಡೀ ಬಾದಾಮಿ ಜನರು ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯ ಮಾಡಿದ್ದರು ಹಾಗಾಗಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ದಿಸಿದ್ದರು ಎಂದು ಹೇಳಿದರು. ಇನ್ನೂ ಕೊಪ್ಪಳಕ್ಕೆ ಸಿದ್ದರಾಮಯ್ಯ ಬರುವದಾದರೆ ಕೊಪ್ಪಳ ಬಿಟ್ಟು ಕೊಡುವುದು ಅಷ್ಟೇ ಅಲ್ಲ, ಅತ್ಯಂತ ಹೆಚ್ಚು ಅಂತರದಿಂದ ಗೆಲ್ಲಿಸುತ್ತೇವೆ

ನಾನು ಸಂತೋಷದಿಂದ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದರು. ಬರೀ ನಾನು ಅಷ್ಟೇ ಅಲ್ಲಾ ಬೈರತಿ ಹೆಬ್ಬಾಳ ಕ್ಕೆ ಬನ್ನಿ ಅಂತಿದ್ದಾರೆ. ಜಮೀರ್ ಅಹ್ಮದ್ ಕೂಡ ಬೇಡಿಕೆ ಇಟ್ಟಿದ್ದಾರೆ ಸಿದ್ದರಾಮಯ್ಯ ಅವರೊಂದು ಶಕ್ತಿ, ಅವರು ಸ್ಪರ್ಧೆ ಮಾಡುವ ಭಾಗದಲ್ಲಿ ಅಭಿವೃದ್ಧಿ ಆಗುತ್ತದೆ.ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎಂಬುದು ಮಾಧ್ಯಮಗಳ ಸೃಷ್ಠಿ ಮಾತ್ರ ಅವರನ್ನು ನಿಲ್ಲಿಸಬೇಕು ಎಂಬುದು ಅವರ ಬೆಂಬಲಿಗರಲ್ಲಿ ಜಟಾಪಟಿ ಇದೆ ಎಂದರು.ಇನ್ನೂ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಇಬ್ಬರು ಮೂವರು ಸಿಎಂ ಆಗಿದ್ದಾರೆ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ, ಸಮಸ್ಯೆ ಇದೆಇವರು ಬದಲಾಗಣೆ‌ ಆಗುವ ನಿರೀಕ್ಷೆ ಕೂಡ ಇದೆ ಎಂದು ಮತ್ತೊಮ್ಮೆ ಸಿಎಂ ಬದಲಾವಣೆ ವಿಚಾರವನ್ನು ಮುನ್ನಲೆಗೆ ತಂದರು.

RELATED ARTICLES

Related Articles

TRENDING ARTICLES