Monday, December 23, 2024

ಸಿಲಿಕಾನ್ ಸಿಟಿಯಲ್ಲಿ ಆಲಿಯಾ ಜೊತೆ ರಾಮ್- ಭೀಮ್, ಮೌಳಿ

ರಣ- ರೌದ್ರ- ರುಧೀರಗಳ ಮಹಾಸಂಗಮಕ್ಕೆ ಸಾಕ್ಷಿ ಆಯ್ತು ಸಿಲಿಕಾನ್ ಸಿಟಿ ಬೆಂಗಳೂರು. ಹೌದು, ರಾಜಮೌಳಿ ಈ ಹಿಂದೆ ಪ್ರಾಮಿಸ್ ಮಾಡಿದಂತೆ ಸೀತೆ ಸಮೇತ ರಾಮ್- ಭೀಮ್​ರನ್ನ ಕರುನಾಡಿಗೆ ಕರೆತಂದಿದ್ರು. ಕನ್ನಡ ಹಾಗೂ ಕರ್ನಾಟಕದ ನಂಟಿನ ಜೊತೆ ತ್ರಿಬಲ್ ಆರ್ ಟೀಮ್​ಗಿರೋ ಕನ್ನಡಾಭಿಮಾನ, ಸಿನಿಮೋತ್ಸಾಹದ ಪರಿಚಯವಾಯ್ತು.

ಬಾಹುಬಲಿ ನಂತರ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾದ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. 400 ಕೋಟಿ ಬೃಹತ್ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಬಿಗ್ಗೆಸ್ಟ್ ಮಲ್ಟಿಸ್ಟಾರ್ ಚಿತ್ರವಾಗಲಿದ್ದು, ತೆಲುಗಿನ ಜೊತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಇದೇ ಜನವರಿ 7ಕ್ಕೆ ತೆರೆಗಪ್ಪಳಿಸಲಿದೆ.

ಇತ್ತೀಚೆಗೆ ಟ್ರೈಲರ್ ಲಾಂಚ್ ಆಗಿತ್ತು. ಯೂಟ್ಯೂಬ್​ನಲ್ಲಿ ಅದು ಮಿಲಿಯನ್ ಗಟ್ಟಲೆ ವೀವ್ಸ್ ಮೂಲಕ ಧೂಳೆಬ್ಬಿಸ್ತಿದೆ. ಆದರೆ ರಾಜಮೌಳಿ ಇತ್ತೀಚೆಗೆ ಬಂದು ಜನನಿ ಸಾಂಗ್ ಲಾಂಚ್ ಮಾಡಿ ಹೋಗಿದ್ದರು. ಆಗ ಸದ್ಯದಲ್ಲೇ ನನ್ನ ತಂಡದ ಜೊತೆ ಬಂದು ಮಾಧ್ಯಮಗಳ ಮುಂದೆ Q & A ಸೆಷನ್ ಮಾಡುತ್ತೇನೆ ಅಂತ ಪ್ರಾಮಿಸ್ ಕೂಡ ಮಾಡಿದ್ದರು. ಅದರಂತೆ ಇಂದು ಸಿಲಿಕಾನ್ ಸಿಟಿಯಲ್ಲಿ ಜೂನಿಯರ್ ಎನ್​ಟಿಆರ್, ರಾಮ್ ಚರಣ್, ಆಲಿಯಾ ಭಟ್ ಜೊತೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದರು.

ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಸುಪ್ರೀತ್, ನಿಶಾ ವೆಂಕಟ್ ಕೋಣಂಕಿ ಹಾಗೂ ವೆಂಕಟ್ ನಾರಾಯಣ್ ಅವರು ತ್ರಿಬಲ್ ಆರ್ ಕನ್ನಡ ಅವತರಣಿಕೆಯನ್ನ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ. ಸ್ವತಂತ್ರಪೂರ್ವ ಭಾರತದ ಇಬ್ಬರು ಫ್ರೀಡಂ ಫೈಟರ್​ಗಳ ಕಥಾನಕವಿರೋ ಇದನ್ನ ಸಿನಿಮ್ಯಾಟಿಕ್ ಆಗಿ ಕಮಿರ್ಷಿಯಲ್ ಆಗಿ ತೋರಿಸೋ ಪ್ರಯತ್ನ ಮಾಡಿದ್ದಾರೆ ಮೌಳಿ.

RELATED ARTICLES

Related Articles

TRENDING ARTICLES