Monday, December 23, 2024

ಮೇಲ್ಮನೆಗೆ ಮತದಾನ ಮಾಡದ 7 ಮಂದಿ

ಚಾಮರಾಜನಗರ : ಮೇಲ್ಮನೆ ಚುನಾವಣೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಉತ್ಸಾಹದಿಂದ ಮತದಾನ ಮಾಡಿದ್ದು 7 ಮಂದಿ ಹೊರತುಪಡಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಇಂದು ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 2275 ಮತದಾರರಲ್ಲಿ 2268 ಮತ ಚಲಾವಣೆಯಾಗಿದ್ದು, ಶೇ 99.69ರಷ್ಟು ಮತದಾನವಾಗಿದೆ. ತಾಲೂಕುವಾರು ಗಮನಿಸಿದರೇ ಚಾಮರಾಜನಗರ- 99.74%ರಷ್ಟು ಮತದಾನವಾಗಿದೆ.

ಅದೇ ರೀತಿ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 99.81, ಯಳಂದೂರಿನಲ್ಲಿ ಶೇ. 99.02, ಕೊಳ್ಳೆಗಾಲದಲ್ಲಿ ಶೇ.99.70 ಹಾಗೂ ಹನೂರಿನಲ್ಲಿ ಶೇ. 99.77 ರಷ್ಟು ಮತದಾನವಾಗಿದೆ.

ಚಾಮರಾಜನಗರ-ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ ಬಿಜೆಪಿಯಿಂದ ರಘು ಕೌಟಿಲ್ಯ, ಕಾಂಗ್ರೆಸ್​ನಿಂದ ತಿಮ್ಮಯ್ಯ, ಜೆಡಿಎಸ್​ನಿಂದ ಮಂಜೇಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಕಣದಲ್ಲಿದ್ದಾರೆ.

RELATED ARTICLES

Related Articles

TRENDING ARTICLES