Wednesday, January 22, 2025

ಮತದಾನದ ಸಮಯದಲ್ಲಿ ಗರಂ ಆದ ಶಾಸಕ ಪುಟ್ಟರಂಗ ಶೆಟ್ಟಿ

ಚಾಮರಾಜನಗರ : ಮೈಸೂರು- ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರಕ್ಕೆ ಬಿರುಸಿನ ಮತದಾನ ನಡೆಯುತ್ತಿದ್ದು ಚುನಾಯಿತ ಪ್ರತಿನಿಧಿಗಳು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ‌.

ಮತದಾನ ಮಾಡಲು ಚಾಮರಾಜನಗರ ನಗರಸಭೆ ಮತಗಟ್ಟೆಗೆ ಆಗಮಿಸಿದ ಕೈ ಶಾಸಕ ಪುಟ್ಟರಂಗಶೆಟ್ಟಿ, ಬಿಜೆಪಿ ಸದಸ್ಯರು ಪಕ್ಷದ ಚಿನ್ನೆಯ ಶಲ್ಯ ಹೊದ್ದು ಬಂದಿದ್ದಕ್ಕೆ ಗರಂ ಆಗಿ ಮಾತಿನ ಚಕಮಕಿ ನಡೆಸಿದರು. ” ನೀವು ಇಲ್ಲಿ ಮತದಾನ ಮಾಡಬೇಕು, ಪ್ರಚಾರವನ್ನಲ್ಲ, ಬಿಜೆಪಿ ಚಿಹ್ನೆಯನ್ನೇಕೆ ಪ್ರದರ್ಶನ ಮಾಡುತ್ತಿದ್ದೀರಿ ಎಂದು ಶಾಸಕರು ಹರಿಹಾಯ್ದರು.

ಇದಕ್ಕೆ ಪ್ರತ್ಯುತ್ತರ ಕೊಟ್ಟ ಬಿಜೆಪಿ ಕಾರ್ಯಕರ್ತರು, ತಾವೇನು ಪ್ರಚಾರ ಮಾಡುತ್ತಿಲ್ಲ, ಮತದಾನ ಮಾಡಿ ತೆರಳುತ್ತೇವೆ ಎಂದು ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 139 ಗ್ರಾಮ ಪಂಚಾಯ್ತಿಗಳಿದ್ದು, 5 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 2269 ಮತದಾರರಿದ್ದಾರೆ. ಇವರಲ್ಲಿ, 1082 ಪುರುಷ ಹಾಗೂ 1187 ಮಹಿಳಾ ಮತದಾರರಿದ್ದಾರೆ. ಅನಕ್ಷರಸ್ಥರು, ಅಂಧರ ಪರವಾಗಿ ಮತ ಚಲಾಯಿಸುವ 44 ಮಂದಿ ಪ್ರಾಕ್ಸಿ ವೋಟರ್ಸ್ ಜಿಲ್ಲೆಯಲ್ಲಿದ್ದು ಹನೂರು ತಾಲೂಕಲ್ಲೇ 21 ಮಂದಿ ಈ ಬದಲಿ ಮತದಾರರಿದ್ದಾರೆ.

134 ಮತಗಟ್ಟೆ ಸ್ಥಾಪಿಸಲಾಗಿದ್ದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಚುನಾವಣೆ ಮುಗಿದ ಬಳಿಕ ಮತಪೆಟ್ಟಿಗೆಗಳನ್ನು ಮೈಸೂರಿನ ಮಹಾರಾಣಿ ವಾಣಿಜ್ಯ & ನಿರ್ವಹಣಾ ಕಾಲೇಜಿನ ಸ್ಟ್ರಾಂಗ್‍ರೂಂನಲ್ಲಿ ಇರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

RELATED ARTICLES

Related Articles

TRENDING ARTICLES