Wednesday, January 22, 2025

ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ : ಸಭಾಪತಿ ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ : ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ.ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು. ನಾನು ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ಮತದಾನದ ಬಳಿಕ ಮಾತನಾಡಿದ ಬಸವರಾಜ್ ಅವರು, ಇದೇ ತಿಂಗಳು 13 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಅಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಶ್ನೋತ್ತರಗಳಿಗೆ ನಮ್ಮ ಹಕ್ಕಿದೆ ಸದನವನ್ನ ಸಂಪೂರ್ಣಗೊಳಿಸಬೇಕು. ಚರ್ಚೆಗೆ ಬರುವ ವಿಷಯಗಳ ಬಗ್ಗೆ ಸುದೀರ್ಘ ಅವಲೋಕನ ಮಾಡುವ ಗುರಿ ಇದೆ.ಸದಸ್ಯರ ಚರ್ಚೆಗೆ ಹೆಚ್ಚಿನ ಸಮಯ ವ್ಯಯ ಮಾಡುವ ಉದ್ದೇಶ ಇದೆ.ಹಾಗಾಗಿ‌ ಎಲ್ಲರನ್ನೂ ಸಹಕಾರ ನೀಡುವಂತೆ ಕೇಳಿಕೊಂಡಿದ್ದೇನೆ ಎಂದರು.

ವಿಷಯಾಧಾರಿಯ ಚರ್ಚೆ ಮಾಡಬೇಕು ಅಂತ ಮನವಿ ಮಾಡಿದ್ದೇನೆ. ನಿನ್ನೆಯವರೆಗೂ ಒಂದೇ ವಿಧೇಯಕ ಬಂದಿಲ್ಲ.ಅಧಿವೇಶನಕ್ಕೆ 5 ದಿನ ಮುಂಚಿತವಾಗಿಯೇ ವಿಧೇಯಕಗಳ ಮಾಹಿತಿ ಅಧಿಕೃತವಾಗಿ ಬರಬೇಕು.
ದುರಾದೃಷ್ಟಕ ಇನ್ನೂ ವಿಧೇಯಕಗಳ ಬಗ್ಗೆ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿಗೆ, ವಿಪಕ್ಷ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದರು.

RELATED ARTICLES

Related Articles

TRENDING ARTICLES