Wednesday, January 22, 2025

ನಾನೇ ಸಿಎಂ ಆಗುತ್ತೇನೆ ಶಾಮನೂರು

ದಾವಣಗೆರೆ : ಎಂ ಲ್ ಎ ಚುನಾವಣೆಯಲ್ಲಿ ನಾನು ಪ್ರಬಲವಾಗಿ ಸಿಎಂ ಸ್ಥಾನ ಕೇಳುತ್ತೇನೆಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷದ ಹಿರಿಯ ನಾಯಕ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಈಗ ಸಿ ಎಂ ಕುರ್ಚಿಯ ಮೇಲೆ ಆಸೆಯಾಗಿದೆ. ಹಾಗಾಗಿ ನಾನೇ ಸಿಎಂ ಆಗುತ್ತೇನೆ ಎಂದಿದ್ದಾರೆ. ನಮಗೆ ಯಾರ ಬೆಂಬಲವೂ ಬೇಡ. ಈ ಬಾರಿ ಎಂಎಲ್ ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಯನ್ನು ಖಂಡಿತವಾಗಿಯೂ ಭಾರಿಸುತ್ತದೆ.

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟ ಶಾಮನೂರು. ಇದುವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ, ಸಿದ್ದರಾಮಯ್ಯ ಮಾತ್ರ ಸಿಎಂ ಕುರ್ಚಿಗೆ ರೇಸ್​ನಲ್ಲಿದ್ದರು. ಆದರೆ ಈಗ ಆ ಸಾಲಿಗೆ ಶಾಮನೂರು ಬಂದಿದ್ದಾರೆ. ಎಂ ಎಲ್ ಎ ಚುನಾವಣೆಯಲ್ಲಿ ನಾನು ಪ್ರಬಲವಾಗಿ ಸಿಎಂ ಸ್ಥಾನ ಕೇಳುತ್ತೇನೆ. ಎಲ್ಲಾ ಕಡೇ ಕಾಂಗ್ರೆಸ್​ಗೆ ಒಳ್ಳೆಯ ಗಾಳಿ ಇದೆ. ಹಾಗಾಗಿ ಈ ಬಾರಿ ಎಂಎಲ್ ಸಿ ಚುನಾವಣೆ ಗೆಲ್ಲುತ್ತೇವೆ. ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷೆಯಾಗಿದ್ದೇನೆ. ಮುಂದೆ ಎಂಎಲ್ ಎ ಚುನಾವಣೆಯನ್ನು ಗೆಲ್ಲುತ್ತೇವೆ. ಆಗ 140 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಅವಾಗ ಡಿಕೆಶಿ, ಸಿದ್ದರಾಮಯ್ಯರಂತೆ ನಾನು ಸಿಎಂ ಸ್ಥಾನ ಕೇಳೆ ಕೇಳುತ್ತೇನೆ. ಕೊನೆಯಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದ ಶಾಮನೂರು ಅವರು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES