ಬೆಂಗಳೂರು : ಕೊರೋನಾ ರೂಪಾಂತರಿ ಓಮಿಕ್ರಾನ್ ಪತ್ತೆ ಹಿನ್ನೆಲೆ ಇಂದು ಬೆಳಗ್ಗೆ ಹತ್ತು ಗಂಟೆಗೆ ಸಿಎಂ ನೇತೃತ್ವದಲ್ಲಿ ಮಹತ್ವದ ಕ್ಯಾಬಿನೆಟ್ ಸಭೆ ನಡೆಯಲಿದೆ.
ರಾಜ್ಯದಲ್ಲಿ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಫೆಬ್ರವರಿಯಲ್ಲಿ ಮೂರನೇ ಅಲೆ ಬರುವ ಸಾಧ್ಯತೆಯಿದೆ ಅಂತ ತಜ್ಞರ ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ಇಂದು ಸಿಎಂ ಓಮಿಕ್ರಾನ್ ಹರಡೋದನ್ನ ತಡೆಯೋ ನಿಟ್ಟಿನಲ್ಲಿ ಚರ್ಚೆ ಮಾಡಲಿದ್ದಾರೆ. ಈ ಸಭೆಯಲ್ಲಿ ಸಚಿವರು ಮತ್ತು ಕೋವಿಡ್ ತಜ್ಞ ಸುದರ್ಶನ್ ಅವರಿಗೆ ಆಹ್ವಾನ ನೀಡಲಾಗಿದೆ.
ಜಿಲ್ಲೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸಚಿವರಿಗೆ ಸೂಚಿಸೋ ಸಾಧ್ಯತೆಯಿದೆ. ಹಾಗೂ 18 ವರ್ಷ ಒಳಪಟ್ಟವರಿಗೆ ಮತ್ತು ಶಾಲಾ ಮಕ್ಕಳಿಗೆ ವ್ಯಾಕ್ಸಿನ್ ನೀಡಿಲ್ಲದೇ ಇರುವುದರಿಂದ ಹೆಚ್ಚಾಗಿ ಸೋಂಕು ತಗುಲುವ ಆತಂಕ ಇದೆ. ಅಲ್ಲದೇ ಈಗಾಗಲೇ ವಸತಿ ಶಾಲೆಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ತರಗತಿಗಳನ್ನ ಹೇಗೆ ನಡೆಸಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ ಸಿಎಂ.
ಭೌತಿಕ ತರಗತಿಗೆ ಬ್ರೇಕ್ ಹಾಕಿ, ಆನ್ ಲೈನ್ ತರಗತಿಗಳನ್ನ ಆರಂಭಿಸೋ ಸಾಧ್ಯತೆಯಿದೆ. ಅಲ್ಲದೇ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪಿದ್ದರೇ ದಿನ ಬಿಟ್ಟು ದಿನ ಬರುವ ವ್ಯವಸ್ಥೆ ಮಾಡುವ ಸಾಧ್ಯತೆಯಿದೆ. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗೂಡುವುದಕ್ಕೆ ಬ್ರೇಕ್, ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಸೂಚನೆ, ಈಗಾಗಲೇ ಮದುವೆಗೆ 500 ಜನ ಮೀರದಂತೆ ನಿರ್ಬಂಧ ಹೇರಿರುವ ಸರ್ಕಾರ. ವ್ಯಾಕ್ಸಿನ್ ಪಡೆಯದಿರೋರನ್ನ ಪತ್ತೆ ಮಾಡಿ ವ್ಯಾಕ್ಸಿನ್ ಕೊಡಿಸಲು ಸೂಚನೆ ಸಾಧ್ಯತೆ..
ಈಗಾಗಲೇ ಬಿಬಿಎಂಪಿ ಸೇರಿದಂತೆ, ಕೆಲವು ನಗರಗಳಲ್ಲಿ ಪತ್ತೆ ಕಾರ್ಯ ಆರಂಭವಾಗಿದೆ. ಮತ್ತು ಹೆಚ್ಚು ಜನ ಸೇರುವ ಮಾಲ್, ಥಿಯೇಟರ್ ಮಾಲ್, ಥಿಯೇಟರ್ ಪ್ರವೇಶಕ್ಕೆ ಎರಡು ಡೋಸ್ ಕಡ್ಡಾಯ ಮಾಡಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವ ಸಾಧ್ಯತೆಯುಂಟು. ರಾಜ್ಯದಲ್ಲಿ ಅತಿ ಹೆಚ್ಚು ಜನ ಸೇರುವ ಕಡೆ ಕೊರೋನಾ ಟೆಸ್ಟ್ ಮಾಡಿಸುವ ಗುರಿಯನ್ನು ಹೊಂದಿದೆ.
ಇದರ ಜೊತೆಗೆ ಸೋಮವಾರದಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಬಗ್ಗೆ ಹಾಗೂ ಪ್ರತಿಪಕ್ಷದವರಿಗೆ ಉತ್ತರ ಹೇಗೆ ನೀಡಬೇಕೆಂದು ಚರ್ಚೆಯಾಗಲಿದೆ.