Sunday, December 22, 2024

ಖರ್ಗೆ ಹತಾಶರಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ : ಡಾ ಉಮೇಶ್ ಜಾಧವ್

ಕಲಬುರಗಿ : ಚಿಂಚೋಳಿಯಲ್ಲಿ ನನ್ನ ಬಗ್ಗೆ ಪ್ರಿಯಾಂಕ್ ಖರ್ಗೆ ಅಪಪ್ರಚಾರ ಮಾಡಿದ್ದಾರೆಂದು ಸಂಸದ ಡಾ ಉಮೇಶ್ ಜಾಧವ್ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಹತಾಶರಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆಂದು ವಾಗ್ದಳಿ ನಡೆಸಿದ್ದಾರೆ. ಪ್ರಿಯಾಂಕ್ ಹಿಂದೆ ಅವರ ತಂದೆಯವರ ಬ್ಯಾನರ್ ಇದೆ, ಆದರೆ ನನ್ನ ಹಿಂದೆ ಯಾವುದೇ ಬ್ಯಾನರ್ ಇಲ್ಲ. ಅಲ್ಲದೇ ನಾನು 20/25 ಕೋಟಿ ಪಡೆದು ಬೇರೆ ಪಕ್ಷಕ್ಕೆ ಬಂದಿದ್ದೇನೆ ಅಂತಾ ಖರ್ಗೆ ಅವರು ಹೇಳಿದ್ದಾರೆ. ನಾನು ಹಣ ಪಡೆದು ಬೇರೆ ಪಕ್ಷಕ್ಕೆ ಬಂದಿದ್ದರೆ ಲೋಕಸಭೆ ಉಪಚುನಾವಣೆ ಮತ್ತು ಚಿಂಚೋಳಿ ವಿಧಾನಸಭೆ ಚುನಾವಣೆಯಲ್ಲಿ ಜನ ಯಾಕೆ ನನ್ನನ್ನು ಗೆಲ್ಲಿಸುತ್ತಿದ್ದರು ? ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಬರೀ ಬೇರೆಯವರನ್ನು ಅಪಪ್ರಚಾರ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. 1963 ರಲ್ಲಿ ಕಾಂಗ್ರೆಸ್ ತೊರೆದು ದೇವರಾಜ ಅರಸ್ ಜೊತೆ ಖರ್ಗೆಯವರು ಹೋಗಿದ್ದರು. ಆಗಿದ್ದರೆ ಅಂದು ಖರ್ಗೆಯವರು ಎಷ್ಟು ಹಣ ಪಡೆದು ಬೇರೆ ಪಕ್ಷಕ್ಕೆ ಹೋಗಿದ್ದರೆಂದು ಸಂಸದ ಡಾ ಉಮೇಶ್ ಜಾಧವ್ ಅವರು ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES