Wednesday, January 22, 2025

ದೇವಸ್ಥಾನದ ಹುಂಡಿಯನ್ನೂ ಬಿಡದ ಕಳ್ಳರು!

ಬೆಂಗಳೂರು: ಇಂದಿನ ಕಲಿಗಾಲದಲ್ಲಿ ಕಳ್ಳರು ದೇವರನ್ನೂ ಸಹ ಬಿಡುತ್ತಿಲ್ಲ. ಅಂಥದ್ದರಲ್ಲಿ ದೇವರ ಹುಂಡಿಯನ್ನು ಬಿಡುತ್ತಾರೆಯೇ? ಹೌದು, ಕಳ್ಳರು ದುಡ್ಡಿಗಾಗಿ ದೇವರನ್ನು ಬೇಡಿಕೊಳ್ಳುವ ಗೋಜಿಗೆ ಹೋಗದೆ ನೇರ ದೇವರ ಹುಂಡಿಗೆ ಸ್ಕೆಚ್ ಹಾಕಿ ಹೊತ್ತೊಯ್ದಿರುವ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ.

ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ ನಡೆದಿರುವ ಈ ಘಟನೆಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳವಾರ ತಡರಾತ್ರಿ ಸುಮಾರು 1.30ರ ಸುಮಾರಿಗೆ ಇಬ್ಬರು ಆರೋಪಿಗಳಿಂದ ಈ ಕೃತ್ಯ ನಡೆದಿದೆ. ಚೋಳನಾಯಕನಹಳ್ಳಿಯಲ್ಲಿರುವ ಶಂಭುಲಿಂಗೇಶ್ವರ ಹಾಗೂ ಶನೇಶ್ವರ ದೇವಾಲಯದಲ್ಲಿ ಈ ಕೃತ್ಯ ನಡೆದಿದೆ.

ಕಳೆದ ಒಂದು ವರ್ಷದಿಂದಲೂ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ ಎನ್ನಲಾಗಿದೆ. ಇದನ್ನು ನೋಡಿದರೆ ಈ ದೇವಸ್ಥಾನದ ಬಗ್ಗೆ ಸರಿಯಾಗಿ ತಿಳಿದಿರುವವರೆ ಈ ಕೃತ್ಯ ಮಾಡಿರಬಹುದು ಎಂಬಂತಿದೆ. ಸ್ಥಳಕ್ಕೆ ಹೆಬ್ಬಾಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

RELATED ARTICLES

Related Articles

TRENDING ARTICLES