Thursday, December 19, 2024

ನನ್ನ ಗೆಲುವು ಖಚಿತ : ಸುನೀಲಗೌಡ ಪಾಟೀಲ

ವಿಜಯಪುರ : ನಾನು ಕಳೆದ ಮೂರು ವರ್ಷಗಳಿಂದ ಸಹಿತ ಸ್ಥಳಿತ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವೆ ಹೀಗಾಗಿ ನನ್ನ ಗೆಲುವು ಖಚಿತ ಎಂದು ಕಾಂಗ್ರೆಸ್ ಎಂ ಎಲ್ ಸಿ ಅಭ್ಯರ್ಥಿ ಸುನೀಲಗೌಡ ಪಾಟೀಲ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸುನೀಲಗೌಡ ಪಾಟೀಲ ನಾನು ಬಸನಗೌಡ ಪಾಟೀಲ ಯತ್ನಾಳ ಅವರಿಂದ ತೆರವಾದ ಸ್ಥಾನಕ್ಕೆ ಪಕ್ಷದ ಮುಖಂಡರು ನನಗೆ ಟಿಕೇಟ್ ನೀಡಿ ಗೆಲ್ಲಿಸಿದ್ದರು. ನನಗೆ ಸಿಕ್ಕ ಮೂರು ವರ್ಷದ ಅವಧಿಯಲ್ಲಿಯೇ ಪ್ರತಿ ಗ್ರಾಮ ಪಂಚಾಯತಿ ಸದಸ್ಯರನ್ನು ಹಿಡಿದು ಸ್ಥಳಿಯ ಜನ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವೆ.

ಕೋವಿಡ್ ಸಂದರ್ಭದಲ್ಲಿ ಸಹಿತ ಪ್ರತಿ ಗ್ರಾಮ‌ ಪಂಚಾಯತಿಗೆ ಸ್ಯಾನಿಟೈಸ್ ಮಷೀನ್ ಕೊಟ್ಟಿರುವೆ, ಹೀಗಾಗಿ ಈ ಬಾರಿ ಮತ್ತೆ ನನ್ನ ಗೆಲುವು ಖಚಿತ ಕಳೆದ ಚುನಾವಣೆಯಲ್ಲಿ 2 ಸಾವಿರಕ್ಕೂ ಅಧಿಕ ಮತ ಪಡೆದು ಗೆದ್ದರೆ ಈ ಬಾರಿ ಅದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದು ನಾನು ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES