Monday, December 23, 2024

ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ : ಮಲ್ಲಿಕಾರ್ಜುನ ಲೋಣಿ

ವಿಜಯಪುರ : ಬಾಗಲಕೋಟ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ದಿನಾಂಕ 10 ರಂದು ಜರುಗುವ ಮತದಾನದ ಕೇಂದ್ರಗಳಲ್ಲಿ ದುರುಪಯೋಗ ತಡೆಗಟ್ಟಲು ಸಿಸಿ ಕ್ಯಾಮರಾ ಅಳವಡಿಸಲು ಮತ್ತು ಮತದಾನದ ಸಂದರ್ಭದಲ್ಲಿ ಅಂಧರು ಮತ್ತು ವಿಶೇಷ ಚೇತನರ ಮತದಾನ ದುರುಪಯೋಗವಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಚುನಾವಣೆ ಆಯೋಗಕ್ಕೆ ಮನವಿ ಮಾಡಿದರು.

ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ ನೂತನವಾಗಿ ಗ್ರಾಮ ಪಂಚಾಯತಿ ಸದಸ್ಯರಿಗೆ ಪ್ರಥಮ ಪ್ರಾಶಸ್ತ್ಯ ಮತದ ಕುರಿತು ತಿಳುವಳಿಕೆ ನೀಡಲಿ, ಕೆಲವೊಂದು ಕಡೆ ಪಿಡಿಓಗಳು ಪ್ರಚಾರ ಮಾಡುತ್ತಿದ್ದಾರೆ, ಇದು ನನ್ನ ಗಮನಕ್ಕೆ ಬಂದಿದೆ. ನಮ್ಮ ಎದುರಾಳಿಗಳು ರಾಷ್ಟ್ರೀಯ ಪಕ್ಷಗಳ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪ್ರಭಾವಿ ಅಭ್ಯರ್ಥಿಗಳು ಆಗಿರುವುದರಿಂದ ಮತದಾನದ ಸಮಯದಲ್ಲಿ ಇವರು ಪ್ರಭಾವ ಮತ್ತು ದುರುಪಯೋಗ ಆಗುವ ಸಾಧ್ಯತೆಗಳಿರುತ್ತವೆ. ಈ ವ್ಯವಸ್ಥೆಯನ್ನು ಮಾಡಲು ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಪೂರಕ ತಯಾರಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಸದರಿ ವ್ಯವಸ್ಥೆಯನ್ನು ನಮ್ಮ ಅವಳಿ ಜಿಲ್ಲೆಗಳ ಚುನಾವಣೆಯಲ್ಲಿಯೂ ಕೂಡ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಮತದಾರರ ಅಭಿಪ್ರಾಯ ಪಡೆದೆ ಚುನಾವಣೆಯ ಕಣದಲ್ಲಿ ಸ್ಪರ್ಧೆ ಮಾಡಿದ್ದಿನಿ, ಸದಸ್ಯರು ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕು ಎಂದು ಮನವಿ ಮಾಡಿದರು. ಇನ್ನೂ ಗ್ರಾಮ ಪಂಚಾಯತಿ ಸದಸ್ಯರ ಕಷ್ಟಗಳಿಗೆ ಸ್ಪಂಧಿಸಬೇಕಿತ್ತು ಆದ್ರೆ ತಾವು ಸ್ಪಂದಿಸಲಿಲ್ಲ ಈಗ ಚುನಾವಣೆಯ ಹೊಸ್ತಿಲಿನಲ್ಲಿ ಹೇಳ್ತಾ ಇದ್ದಿರಿ, ವಿಧಾನಸಭೆಗೆ ಹೋಗಲು ಸ್ಟಿಕರ್ ಬಳಸಿದ್ದಿರಿ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದ ಕಗ್ಗೊಲೆ ಆಗಿದೆ. ಇವತ್ತು ಮತದಾರರು ನನ್ನ ಬೆಂಬಲಕ್ಕಾಗಿ ನಿಂತಿದ್ದಾರೆ, ಸ್ಥಳೀಯ ಸಂಘ ಸಂಸ್ಥೆಗಳನ್ನು ಗಟ್ಟಿಗೊಳಿಸುವ ಕೆಲಸ ನಾನು ಮಾಡುವೆ ಎಂದರು.

RELATED ARTICLES

Related Articles

TRENDING ARTICLES