ಹುಬ್ಬಳ್ಳಿ : ಕರ್ನಾಟಕ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ವರಿಷ್ಠರು ತಿಳಿಸಿದಂತೆ ನಾವು ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿ ಸಲೀಂ ಅಹ್ಮದ್ ಅವರಿಗೆ ಬೆಂಬಲ ಸೂಚಿಸಲು ತೀರ್ಮಾನಿಸಲಾಯಿತು. ಹಾಗಾಗಿ ಜಿಲ್ಲೆಯಲ್ಲಿನ ಜೆಡಿಎಸ್ ನ 1000 ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.
ಇನ್ನೂ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಅಧಿವೇಶನದಲ್ಲಿ ನಂಜುಂಡಪ್ಪ ವರದಿ, ಪರಮಶಿವಪ್ಪ ವರದಿ ಜಾರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದಿಲ್ಲ. ಹಾಗಾಗಿ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕ್ಷೇತ್ರದ ಜನತೆಯ ಜೊತೆ ಮಾತನಾಡಿ ನಿರ್ಧರಿಸುತ್ತೆನೆ. ದೇವೆಗೌಡ್ರು, ಹೆಚ್.ಡಿ.ಕೆ. ಸಿದ್ದರಾಮಯ್ಯ, ಡಿಕೆಶಿ ಅವರು ನಮ್ಮ ನಾಯಕರು. ನಾನು ಪಕ್ಷೇತರವಾಗಿ ನಿಂತ್ರು ನವಲಗುಂದದಲ್ಲಿ ಗೆಲ್ಲುತ್ತೆನೆ.ಆದ್ರೆ ಸಧ್ಯ ನಾನು ರೈತರ ಪರ ಹೋರಾಟ ಅಷ್ಟೆ ನನ್ನ ಗುರಿ.ಸಿಎಂ ಬೊಮ್ಮಾಯಿ ಈ ಅಧಿವೇಶನದಲ್ಲಿ ಮಹಾದಾಯಿ ಯೋಜನೆ ಕಾಮಗಾರಿ ಘೋಷಣೆ ಮಾಡ್ಲಿ.ರೈತರ ಬೆಳೆ ವಿಮೆ ಬಗ್ಗೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.ಆ ಬಗ್ಗೆ ಹೋರಾಟ ಮಾಡ್ತೆನೆ.ಶೀಘ್ರದಲ್ಲೆ ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಮಾಡಿ ಸರ್ಕಾರವನ್ನು ಎಚ್ಚರಿಸೊ ಕೆಲಸ ಮಾಡ್ತೆನೆ.ವಿಮೆ ಸ್ಕ್ಯಾಮ್ ಬಗ್ಗೆ ದೂರು ನೀಡಿದ್ರು, ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.