Saturday, April 19, 2025

ಯುಪಿಯಲ್ಲಿ ಮೋದಿ ಮಣಿಸಲು ತಯಾರಿ

ರಾಜ್ಯ : ಒಂದ್ಕೊಂಡೆ ಕೊರೋನಾ ಟೆನ್ಷನ್‌ ಇದ್ರೆ. ಮತ್ತೊಂದೆಡೆ, ಪಂಚರಾಜ್ಯ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಇನ್ನೇನು ಎರಡ್ಮೂರು ತಿಂಗಳಲ್ಲಿ ಬರ್ತಿರುವ ಈ ಚುನಾವಣೆ ಮೋದಿಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಜೊತೆಗೆ, ಟಾಕ್‌ವಾರ್‌ ಕೂಡ ಜೋರಾಗಿಯೇ ಇದೆ.

ಆಡಳಿತ ರೂಢ ಬಿಜೆಪಿಗೆ ಪ್ರತಿಷ್ಠೆಯ ಕಣ.. ಮೋದಿ ಕಟ್ಟಿಹಾಕಲು ವಿಪಕ್ಷಗಳ ಪಣ.. ಹೌದು, ಮುಂಬರುವ ಪಂಚರಾಜ್ಯ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅದರಲ್ಲೂ ಮೋದಿಗೆ ಪ್ರತಿಷ್ಠೆಯ ಅಖಾಡ ಅಂದರೆ ಉತ್ತರ ಪ್ರದೇಶ.. ಸಾಕಷ್ಟು ಅಭಿವೃದ್ಧಿಗೆ ಒತ್ತು ಕೊಟ್ಟು ಚುನಾವಣೆ ಗೆಲ್ಲುವ ತವಕದಲ್ಲಿರುವ ಮೋದಿ ಆ್ಯಂಡ್‌ ಟೀಂ ಬಹು ನಿರೀಕ್ಷಿತ ಪೂರ್ವಾಂಚಲ್ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಗೋರಖ್‌ಪುರದಲ್ಲಿ 9,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸಗೊಬ್ಬರ ಕಾರ್ಖಾನೆಯನ್ನು ಉದ್ಘಾಟಿಸಿದರು.
ಇನ್ನು, ಈ ವೇಳೆ ಎಸ್ಪಿಯನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಂಪು ಟೋಪಿ ನಾಯಕರೇ ಯುಪಿಗೆ ರೆಡ್‌ ಅಲರ್ಟ್‌ ಎಂದು ಗುಡುಗಿದರು.

2022ರ ಮಾರ್ಚ್ ಬಳಿಕ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಈಗಿನಿಂದಲೇ ಭರ್ಜರಿ ರಣತಂತ್ರ ಹೂಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಉತ್ತರಪ್ರದೇಶದಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ.

ಯುಪಿಯಲ್ಲಿ ಮೋದಿ ಮಣಿಸಲು ತಯಾರಿಗಳು ನಡೆದಿವೆ. ಯುಪಿಯ ಝಾನ್ಸಿಯಲ್ಲಿ ನಡೆದ ವಿಜಯ ಯಾತ್ರೆಯಲ್ಲಿ ಮಾತನಾಡಿದ ಅಖಿಲೇಶ್ ನಾನು ಮಮತಾ ಬ್ಯಾನರ್ಜಿಯವರನ್ನು ಸ್ವಾಗತಿಸುತ್ತಿದ್ದೇನೆ. ಅವರು ಬಂಗಾಳದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡಿದ ರೀತಿಯಲ್ಲೇ, ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಅಳಿಸಿ ಹಾಕುವುದು ಖಂಡಿತ ಎಂದಿದ್ದಾರೆ.

ಇನ್ನು, ಕಾಂಗ್ರೆಸ್ ಶೂನ್ಯ ಸಂಪಾದನೆ ಎಂದಿರೋದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ವಾದ್ರಾ, ಆ ಭವಿಷ್ಯ ಎಲ್ಲ ನಿಜವಾಗಲ್ಲ.. ಏನಾಗುತ್ತೆ ಅಂತ ಚುನಾವಣೆ ಬರಲಿ ನೋಡೋಣ ಎಂದಿದ್ದಾರೆ..

ಹೊಸ ರಾಜಕೀಯ ರಂಗಕ್ಕೆ ಜೈ ಅಂತಾರೋ ಅಥವಾ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಜೊತೆ ಕೈ ಜೋಡಿಸಿ, ಚುನಾವಣೆಗೆ ಸ್ಪರ್ಧೆ ಮಾಡ್ತಾರೋ ಗೊತ್ತಿಲ್ಲ.. ಆದ್ರೆ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಅಖಿಲೇಶ್‌ ಯಾದವ್.. ಆದ್ರೆ, ಯೋಗಿ ಅಡ್ಡದಲ್ಲಿ ಮೋದಿ ಹವಾ ಹೇಗೆ ಚುನಾವಣೆಯಲ್ಲಿ ಕೆಲಸ ಮಾಡಲಿದೆ ಅನ್ನೋದಕ್ಕೆ ಕಾದು ನೋಡಬೇಕು.

RELATED ARTICLES

Related Articles

TRENDING ARTICLES