Monday, December 23, 2024

ಬೆಂಗಳೂರು ವೈದ್ಯನಿಗೆ ಒಮೈಕ್ರಾನ್ ಬಂದ ಮೂಲ ಪತ್ತೆ

ಬೆಂಗಳೂರು: ದೇಶದಲ್ಲೆ ಮೊಟ್ಟಮೊದಲಿಗೆ ಎರಡು ಒಮಿಕ್ರಾನ್ ಪ್ರಕರಣಗಳು ಕರ್ನಾಟಕದ ಬೆಂಗಳೂರಿನಲ್ಲಿ ಪತ್ತೆಯಾಗಿ ಭಾರಿ ಸದ್ದು ಉಂಟುಮಾಡಿದ್ದು ಎಲ್ಲರಿಗೂ ಗೊತ್ತು. ಇದರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಿದ್ದವರಾಗಿದ್ದರಿಂದ ಅಂಥ ಗೊಂದಲವೇನಿರಲಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಡಾಕ್ಟರ್ ಆಗಿದ್ದ ಈ ವ್ಯಕ್ತಿಗೆ ಒಮೈಕ್ರಾನ್ ಬಂದ ಬಗ್ಗೆ ಹತ್ತುಹಲವು ಥಿಯರಿಗಳು ಹುಟ್ಟಿಕೊಂಡಿದ್ದವು. ಇದೀಗ ಕಡೆಗೂ ಇವರಿಗೆ ಒಮೈಕ್ರಾನ್ ಬಂದ ರೀತಿ ಪತ್ತೆಯಾಗಿದೆ.

ಬೆಂಗಳೂರಿನ ಲಲಿತ್ ಅಶೋಕ್ ಫೈವ್ ಸ್ಟಾರ್ ಹೋಟೆಲಿನಲ್ಲಿ ನವೆಂಬರ್ 19,20 ಮತ್ತು 21 ಮೂರು ದಿನಗಳ ಕಾಲ ವೈದ್ಯರ ಒಂದು ಕಾನ್ಫರೆನ್ಸ್ ನಡೆದಿತ್ತು. ಪವರ್ ಟಿವಿಯ ಎಕ್ಸ್ಕ್ಲೂಸಿವ್ ಮಾಹಿತಿಯಂತೆ ಈ ಸಮ್ಮೇಳನವನ್ನು ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಸ್ಥೆ ನಡೆಸಿತ್ತು. ಸುಮಾರು 70 ಕ್ಕೂ ಹೆಚ್ಚು ಹೃದ್ರೋಗ ತಜ್ಱರು ಇದರಲ್ಲಿ ಭಾಗವಹಿಸಿದ್ದರು. ಈ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದ ಬೊಮ್ಮಸಂದ್ರದ ಡಾಕ್ಟರ್​ಗೆ ಈ ಕಾನ್ಫರೆನ್ಸ್ ಮುಗಿದ ನಂತರ ರೋಗದ ಲಕ್ಷಣಗಳು ಪ್ರಾರಂಭವಾಗಿದ್ದವು.

ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿದೇಶಿ ಅತಿಥಿಗಳ ಬಗ್ಗೆ ವಿವರವನ್ನು ನೀಡಲು ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಸ್ಥೆ ಹಿಂದೇಟು ಹಾಕುತ್ತಿದೆ. ಆದರೆ ಆರೋಗ್ಯ ಇಲಾಖೆ ಮತ್ತು ಪಾಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮಾಹಿತಿ ಕಲೆಹಾಕಲು ಶತಾಯಗತಾಯ ಪ್ರಯತ್ನಿಸುತ್ತಿದೆ.

RELATED ARTICLES

Related Articles

TRENDING ARTICLES