Wednesday, January 8, 2025

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸರಣಿ ಅಪಘಾತವೊಂದರಲ್ಲಿ ಒರ್ವ ವ್ಯಕ್ತಿ ಮೃತಪಟ್ಟು, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಹಾಗೂ ಇನ್ನೂ ಹಲವು ವ್ಯಕ್ತಿಗಳಿಗೆ ಸಣ್ಣಪುಟ್ಟ   ಗಾಯಗೊಂಡಿರುವ ಘಟನೆ ನಡೆದಿದೆ. ಈ ಭೀಕರ ಅಪಘಾತಕ್ಕೆ ಕಾರಣವಾಗಿದ್ದು ಒಂದು ಬೆಂಜ್ ಕಾರು. ಅತಿ ವೇಗವಾಗಿ ಬಂದ ಬೆಂಜ್ ಕಾರು ನಿಯಂತ್ರಣ ತಪ್ಪಿ ಒಂದು ಕಾರು, ಎರಡು ಆಟೋ ಮತ್ತು ಒಂದು ಮಿನಿ ಲಾರಿಗೆ ಢಿಕ್ಕಿ ಹೊಡೆದಿದೆ.

ರಕ್ತಸಿಕ್ತರಾದ ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದುವರೆಗೂ ಭಾರತದಲ್ಲಿ ಶ್ರೀಮಂತರ ವಾಹನವೆಂದೇ ಗುರುತಿಸಲ್ಪಡುವ ಬೆಂಜ್ ಕಾರು ನಂದಿತಾ ಚೌಧರಿ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಚಾಲಕನ ಓವರ್ ಸ್ಪೀಡಿನಿಂದಲೇ ಬೆಂಜ್ ಕಾರ್ ಅಪಘಾತ ನಡೆದಿದೆ ಎಂಬುದು ಗೊತ್ತಾಗಿದೆ. ಹಲಸೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

RELATED ARTICLES

Related Articles

TRENDING ARTICLES