Thursday, December 19, 2024

ಎಂಎಸ್​ಜಿಪಿ ಘಟಕ ಮುಚ್ಚಲು ಪ್ರತಿಭಟನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಗೇನಹಳ್ಳಿ ಬಳಿ ಬಿಬಿಎಂಪಿಯ ಕಸ ವಿಲೇವಾರಿಯ ಎಂಎಸ್ ಜಿ ಪಿ ಘಟಕವೊಂದಿದೆ.  ಈ ತ್ಯಾಜ್ಯ ಘಟಕವನ್ನು ಮುಚ್ಚುವಂತೆ ಇಲ್ಲಿ ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ಜನರು ಪ್ರತಿಭಟನೆ ನಡೆಸಿದ್ದಾರೆ. ಮೂಗೇನಹಳ್ಳಿ ಗೇಟ್ ಬಳಿ ನಡೆಯುತ್ತಿರುವ ಈ ಪ್ರತಿಭಟನೆಯನ್ನು ಪ್ರತಿಭಟನಾಕಾರರು ಕೊರೊನಾ ನಿಯಮಾನುಸಾರ ನಡೆಸುತ್ತಿದ್ದಾರೆ.

ಸ್ವತಃ ದೊಡ್ಡಬಳ್ಳಾಪುರ ವಿಧಾಸಭಾ ಕ್ಷೇತ್ರದ ಶಾಸಕರಾದ ಟಿ.ವೆಂಕಟರಮಣಯ್ಯನವರೇ ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದು ಇದು ಎಂ ಎಸ್ ಜಿ ಪಿ ಘನತ್ಯಾಜ್ಯ ವಿರೋಧಿ ಸಮಿತಿಯಿಂದ ನಡೆಯುತ್ತಿದೆ. ಈ ತ್ಯಾಜ್ಯ ಘಟಕದಿಂದ ಸ್ಥಳೀಯರಿಗೆ ತುಂಬ ತೊಂದರೆಯಾಗಿದೆ. ತಕ್ಷಣ ಇದನ್ನು ಮುಚ್ಚಬೇಕು ಎಂದು ಸಮೀತಿ ಆಗ್ರಹಿಸಿದೆ.

RELATED ARTICLES

Related Articles

TRENDING ARTICLES