Wednesday, January 22, 2025

ಪ್ರೋ ಕಬಡ್ಡಿಗೆ ಕ್ಷಣಗಣನೆ

ಬೆಂಗಳೂರು : 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಆವೃತ್ತಿಯ ಟೂರ್ನಿಗೆ ಅಂತಿಮ ಹಂತದ ಸಿದ್ಧತೆ ಆರಂಭಗೊಂಡಿದೆ. ಇನ್ನು ಎಲ್ಲಾ ತಂಡಗಳು ಬೆಂಗಳೂರಿಗೆ ಬಂದಿಳಿದ ನಂತರದಲ್ಲಿ 7 ದಿನಗಳ ಕಡ್ಡಾಯ ಕ್ವಾರಂಟೀನ್​ನಲ್ಲಿ ಇರಬೇಕಾಗಿದೆ.

ಇನ್ನು ಪ್ರತಿ 72 ಗಂಟೆಗೊಮ್ಮೆ ಎಲ್ಲರನ್ನೂ ಆರ್​ಟಿಪಿಸಿಆರ್ ಕೋವಿಡ್ ಪರೀಕ್ಷೆಗೆ ‘ ಒಳಪಡಿಸಲಾಗುತ್ತದೆ. ಕ್ವಾರಂಟೈನ್ ಅವಧಿ ಮುಕ್ತಾಯಗೊಂಡ ಬಳಿಕ ಎಲ್ಲಾ ತಂಡಗಳಿಗೂ ಬಯೋಬಬಲ್ ಆರಂಭವಾಗಲಿದೆ. ನಂತರ ಡಿಸೆಂಬರ್ 22 ರಿಂದ ಟೂರ್ನಿ ಆರಂಭವಾಗಲಿದೆ. ಈ ಆವೃತ್ತಿಯ ಎಲ್ಲಾ ಪಂದ್ಯಗಳು ಬೆಂಗಳೂರಲ್ಲಿಯೇ ನಡೆಯಲಿವೆ.

ಅರುಣ್​ ಹೂಗಾರ್​ , ಪವರ್​ ಟಿವಿ

RELATED ARTICLES

Related Articles

TRENDING ARTICLES