ಬೆಂಗಳೂರು: ನಾವೆಲ್ಲರೂ ಮೃದುವಾದ ಮತ್ತು ಹೊಳೆಯುವ ಚರ್ಮವನ್ನು ಹಂಬಲಿಸುತ್ತೇವೆ. ಆದರೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟ ಮತ್ತು ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹೈಡ್ರೀಕರಿಸಿದ ಚರ್ಮವು ಆರೋಗ್ಯಕರ ಮತ್ತು ಕಾಂತಿಯುತ ತ್ವಚೆಯ ಸೂಚನೆಯಾಗಿದೆ. ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಅಷ್ಟಾಗಿ ಮೈ ಮೇಲೆ ಬೀಳುವುದಿಲ್ಲ ಆದ್ದರಿಂದ ನಮ್ಮ ಚರ್ಮವು ಚಳಿಗಾಲದಲ್ಲಿ ಮಾಲಿನ್ಯದಿಂದ ತೇವಾಂಶದ ನಷ್ಟವನ್ನು ಎದುರಿಸುತ್ತೆ.
ನೈಸರ್ಗಿಕವಾಗಿ ಚರ್ಮವನ್ನ ಕಾಂತಿಯುತವಾಗಿ ಹೇಗೆ ಇಟ್ಟುಕೊಳ್ಳಬೇಕು ಮತ್ತು ನಾವು ಅನುಸರಿಸಬೇಕಾದ ಕ್ರಮಗಳೇನು ಅನ್ನೋ ಕೆಲವು ಸಲಹೆಗಳು ಇಲ್ಲಿವೆ.
ನೈಸರ್ಗಿಕ ಮಾಯಿಶ್ಚರೈಸರ್ಗಳನ್ನು ಬಳಸಿ ತ್ವಚೆ ಮತ್ತು ಮುಖವನ್ನು ಕಾಪಾಡಿಕೊಳ್ಳಿ.
ಅಲೋವೆರಾ ಜೆಲ್:- ಅಲೋವೆರಾ ಜೆಲ್ ಅನ್ನು ಪ್ರತಿದಿನ ಚರ್ಮಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಅಲೋವೆರಾ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ (ANTI ACCIDENT) ನಿರೋಧಕವಾಗಿದೆ ಮತ್ತು ಚರ್ಮವನ್ನು ಆಕ್ಸಿಡೀಕರಣದ ಹಾನಿಯಿಂದ ರಕ್ಷಿಸುತ್ತದೆ, ಹೀಗಾಗಿ ಚರ್ಮದ ಮೇಲೆ ಬರುವಂತಹ ಸುಕ್ಕನ್ನ ಕಡಿಮೆ ಮಾಡುತ್ತದೆ.. ಅಲೋವೆರಾ ಚರ್ಮವನ್ನು ಮೃದುವಾಗಿರಿಸುತ್ತದೆ ಮತ್ತು ಚರ್ಮದ ಕಪ್ಪು ಕಲೆಯನ್ನ ಗುಣಪಡಿಸುವ ಗುಣಗಳನ್ನು ಸಹ ಹೊಂದಿದೆ. ನೀವು ಅದರೊಂದಿಗೆ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಸಹ ತಯಾರಿಸಬಹುದು. ಅಲೋವೆರಾ ಜೆಲ್ ಮತ್ತು ಶುದ್ಧ ನೀರ (ಖನಿಜಯುಕ್ತ ನೀರು) ನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದನ್ನ ಬಿಸಿ ಮಾಡಿದರೆ ಕೆನೆಯ ರೀತಿಯಾಗಿ ರೂಪುಗೊಳ್ಳುವವರೆಗೆ ಬಿಸಿ ಮಾಡಿ. ಅದನ್ನ ತಣ್ಣಗೆ ಆಗೋಕೆ ಬಿಡಿ ಆ ನಂತರ ಅದನ್ನ ಗಾಳಿಯಾಡದ ಜಾರ್‌ನಲ್ಲಿ ಸಂಗ್ರಹಿಸಿ ಪ್ರತಿ ದಿನ ಉಪಯೋಗಿಸಬಹುದು.
ಮಾಗಿದ ಪಪ್ಪಾಯ:- ಮಾಗಿದ ಪಪ್ಪಾಯ ಮತ್ತು ಜೇನುತುಪ್ಪ ಮಿಶ್ರಣ ವಿಟಮಿನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಪಪ್ಪಾಯಿಯು ವಿಟಮಿನ್ ಸಿ ಹೊಂದಿರುವ ಹಣ್ಣಾಗಿದೆ, ಇದು ಸತ್ತ ಜೀವಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ರಂಧ್ರಗಳ ಅಡಚಣೆಯನ್ನು ಸುಗಮಗೊಳಿಸುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಹಾಲಿನೊಂದಿಗೆ ಪಪ್ಪಾಯಿ ಪ್ಯೂರಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪನ ಮಾಡಿ 15 ನಿಮಿಷಗಳ ಕಾಲ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ ಹೀಗೆ ಮಾಡುವುದರಿಂ ನಿಮಗೆ ಹೆಚ್ಚು ಪೌಷ್ಟಿಕಾಂಶವನ್ನ ಈ ಮಿಶ್ರಣ ನೀಡುತ್ತದೆ.
ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ ಮತ್ತು ವಿಟಮಿನ್ ಇ ಹೊಂದಿರುವ ಆಹಾರವನ್ನ ಸೇವನೆ ಮಾಡಬೇಕು. ಗ್ರೀನ್ ಟೀ, ಮತ್ತು ಅರಿಶಿನ ಸೇವನೆ ಮಾಡೋದ್ರಿಂದ ನಿಮ್ಮ ಚರ್ಮವನ್ನು ಹೆಚ್ಚು ಮೃದುವಾಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಸಿಹಿ ಗೆಣಸು, ಕಲ್ಲಂಗಡಿ, ಕಿವಿ, ಬಾದಾಮಿ, ಓಟ್ಸ್, ಹಾಲು, ತರಕಾರಿಗಳು, ಹಣ್ಣುಗಳ ಸೇವನೆಯಿಂದ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು.
ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ
ಪ್ರತಿ ದಿನವೂ ನಿಮ್ಮ ಮನೆಯಿಂದ ಹೊರಬರುವ ಮೊದಲು ನೀವು ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ. ಬಿಸಿಲಿಗೆ ಹೋಗುವ 20 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಅನ್ನು ಹಚ್ಚಿರಿ. ಸನ್‌ಸ್ಕ್ರೀನ್‌ಗಳು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ತೇವಾಂಶದ ನಷ್ಟವನ್ನು ತಡೆಯುತ್ತದೆ. ಮಾಯಿಶ್ಚರೈಸರ್ ಅನ್ನು ಕಾಪಾಡಿಕೊಳ್ಳಬಹುದು. ಚರ್ಮವನ್ನು ತೇವಗೊಳಿಸಲು ಮತ್ತು ತಡೆಯಲು ನಿಮ್ಮ ಮುಖ ಮತ್ತು ದೇಹದ ಮೇಲೆ ಪ್ರತಿದಿನ ಮಾಯಿಶ್ಚರೈಸರ್ ಅನ್ನು ಅಪ್ಲೈ ಮಾಡಿ. ಸ್ನಾನದ ನಂತರ ತಕ್ಷಣವೇ ಮಾಯಿಶ್ಚರೈಸರ್ ಹಚ್ಚಿದರೆ ಅತೀ ಹೆಚ್ಚು ಸಮಯ ತೇವಾಂಶವನ್ನು ಕಾಪಾಡುತ್ತದೆ. ಪ್ರತಿ ದಿನ 6 ಲೀಟರ್ ನೀರು ಕುಡಿಯೋದ್ರಿಂದ ನಿಮ್ಮ ತ್ವಚೆ ಆಕ್ಟೀವ್ ಆಗಿ ಇರಲು ಸಹಾಯ ಮಾಡುತ್ತದೆ.