Sunday, December 22, 2024

ರೈತರ ನೆಮ್ಮದಿಗಾಗಿ ಹೋಮ ಹವನ : ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಶೃಂಗೇರಿ ಶಂಕರ ಮಠದಲ್ಲಿ ಕಾರ್ತಿಕ ಮಾಸದ ಅಮವಾಸ್ಯೆ ಪ್ರಯುಕ್ತ ಹೋಮ ಹವನವನ್ನು ಸಚಿವ ಈಶ್ವರಪ್ಪ ನೆರವೇರಿಸಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಹೋಮ ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾರ್ತಿಕ ಮಾಸದಲ್ಲಿ ಹೋಮ-ಹವನ ಮಾಡುತ್ತಿದ್ದೇವೆ. ರೈತರು, ಜನರು ನೆಮ್ಮದಿಯಿಂದಿರಬೇಕು ಎಂದು ಪ್ರಾರ್ಥಿಸಿದ್ದೇನೆ. ಚುನಾವಣೆಗಾಗಿ ಹೋಮ ಮಾಡಿಲ್ಲ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ.

ಚುನಾವಣೆ ಇದೆ ಅಂತಾ ಹೋಮ ಮಾಡಿಲ್ಲ.ಚುನಾವಣೆಗಳು ಬರ್ತಿರ್ತಾವೆ, ಹೋಗ್ತಿರ್ತಾವೆ.ನೂರು ಚುನಾವಣೆಗಳು ಬರುತ್ತವೆ.ಈ ಚುನಾವಣೆ ಮುಗಿಯುತ್ತಿದ್ದಂತೆ, ತಾ.ಪಂ. ಚುನಾವಣೆ ಬರುತ್ತೆ.ಎಂ.ಎಲ್.ಎ., ಎಂ.ಪಿ. ಚುನಾವಣೆಯೂ ಬರುತ್ತವೆ.ಇತ್ತೀಚಿಗಷ್ಟೇ ಗ್ರಾ.ಪಂ. ಚುನಾವಣೆ ಮುಗಿದು ಹೋಗಿದೆ.ವರ್ಷವಿಡಿ ಚುನಾವಣೆಗಳು ಬರ್ತಾನೆ ಇರ್ತವೆ ಹಾಗಂತಾ ಹೋಮ ನಿಲ್ಲಿಸೋಕೆ ಆಗುತ್ತಾ.ಎಲೆಕ್ಷನ್ ಗೂ, ಹೋಮಕ್ಕೂ ಸಂಬಂಧವಿಲ್ಲ.ಆದರೆ, ಭಗವಂತನ ಕೃಪೆ ಬಿಜೆಪಿ ಮೇಲೆ ಇದೆ.ಕನಿಷ್ಟ 16 ಸ್ಥಾನದಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಎಲ್ಲಾ ನಾಯಕರು ಬೂತ್ ಮಟ್ಟದಲ್ಲಿ ಓಡಾಡಬೇಕೆಂದು ತೀರ್ಮಾನಿಸಿದ್ದೇವೆ. ನಾನು ನಾಳೆಯಿಂದ ತೀರ್ಥಹಳ್ಳಿ, ಹೊನ್ನಾಳ್ಳಿ, ಚೆನ್ನಗಿರಿ, ಸೊರಬಕ್ಕೆ ಹೋಗುತ್ತಿದ್ದೇನೆ. ನಮ್ಮ ಸಂಘಟಕರು ಹೇಗೆ ಹೇಳುತ್ತಾರೋ, ಹಾಗೆ ನಡೆದುಕೊಳ್ಳುತ್ತೇವೆ. ನರೇಂದ್ರ ಮೋದಿಯವರು ಗ್ರಾಮೀಣ ಮಟ್ಟದ ಜನರ ಬದುಕು ಸುಧಾರಣೆಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಈ ಬಗ್ಗೆ ಜನರ ಗಮನ ಸೆಳೆಯುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾ.ಪಂ. ಸದಸ್ಯರು ಈ ಬಗ್ಗೆ ಪ್ರಯತ್ನ ನಡೆಸಬೇಕಿದೆ. ರಾಜ್ಯದಲ್ಲೂ, ಕೇಂದ್ರದಲ್ಲೂ ನಮ್ಮದೇ ಸರ್ಕಾರವಿದೆ. ಇದನ್ನು ಬಳಸಿಕೊಂಡು, ಜನರಿಗೆ ಯೋಜನೆ ತಲುಪಿಸುತ್ತೇವೆ. ರಾಜ್ಯದಲ್ಲಿ ವಿಧಾನಸಭೆಯಲ್ಲಿ ಪೂರ್ಣ ಬಹುಮತವಿದೆ. ಈ ಚುನಾವಣೆ ಮೂಲಕ ವಿಧಾನಪರಿಷತ್​ನಲ್ಲೂ ಪೂರ್ಣ ಬಹುಮತ ಸಾಧಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES